ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಗವರ್ನರ್‌ಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಯಿಂದ ನನಗೆ ಸಮಸ್ಯೆಯಾಗಿದೆ, ನನ್ನ ಗರ್ಭಿಣಿ ಪತ್ನಿ ಕಾರ್‌ನಲ್ಲಿದ್ದಾಳೆ ಎಂದು ವ್ಯಕ್ತಿಯೊಬ್ಬರು ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದ್ದರು. ಈ ಘಟನೆಯ ಅಸಲಿಯತ್ತನ್ನು ಪೊಲೀಸರು ಜನರ ಮುಂದೆ ಇಟ್ಟಿದ್ದಾರೆ.
ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜ್ಯಪಾಲರ ಸಂಚಾರದಿಂದ ಉಂಟಾಗಿದ್ದ ಟ್ರಾಫಿಕ್ ಜಾಮ್‌ಗೆ ವ್ಯಕ್ತಿಯೊಬ್ಬ ಬೇಸತ್ತಿದ್ದ. ಆತ ರಸ್ತೆಯ ಮೇಲೆ ಕುಳಿತು ನಾವೂ ಈ ಊರಿನ ಜನರೇ ನಮಗೂ ವಿಐಪಿ ಟ್ರೀಟ್‌ಮೆಂಟ್ ಕೊಡಿ ಎಂದು ಕೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ವಿಐಪಿಗಳ ಓಡಾಟದಿಂದ ಜನರಿಗೆ ಸಮಸ್ಯೆ ಆಗುತ್ತದೆ ಎಂದು ಟ್ವೀಟ್ ಮಾಡಲಾಗಿತ್ತು.
ಆದರೆ ಈ ಬಗ್ಗೆ ಪೊಲೀಸರು ಮಾತನಾಡಿದ್ದು, ನನ್ನ ಗರ್ಭಿಣಿ ಪತ್ನಿ ಕಾರ್‌ನಲ್ಲಿದ್ದಾರೆ ಎಂದು ವ್ಯಕ್ತಿ ಹೇಳಿದ್ದರು. ಅಸಲಿಗೆ ಕಾರ್‌ನಲ್ಲಿ ಯಾರೂ ಇರಲಿಲ್ಲ. ಆಂಬುಲೆನ್ಸ್ ಅಥವಾ ಮೆಡಿಕಲ್ ಎಮರ್ಜೆನ್ಸಿ ಇರುವವರಿಗೆ ಜಾಗ ಬಿಡುತ್ತೇವೆ. ಆದರೆ ಈ ವ್ಯಕ್ತಿ ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ವಿಡಿಯೋ ಮಾಡಿದಂತಿದೆ. ಪೊಲೀಸ್ ಹಾಗೂ ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡುವ ಮುನ್ನ ಜನ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದಿದ್ದಾರೆ.



