ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಕಾರು: ಚಾಲಕನ ಪ್ರಾಣ ಉಳಿಸಿತು ಸೀಟ್​ ಬೆಲ್ಟ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru-Mysore Highway) ಕಾರು ಡಿವೈಡರ್​ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದ ಘಟನೆ ನಡೆದಿದ್ದು, ಈ ವೇಳೆ ಕಾರು ಚಾಲಕ ಸೀಟ್​ ಬೆಲ್ಟ್​ ಧರಿಸಿದ್ದರಿಂದ ಪ್ರಾಣ ಉಳಿದಿದೆ.ಚಿಕ್ಕ ಗಾಯವಿಲ್ಲದೆ ಯವಕ ಬಚಾವ್​ ಆಗಿದ್ದಾನೆ.

ದಾರಿ ಮಧ್ಯೆ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ನಿಯ ಡಿವೈಡರ್​ಗೆ ಗುದ್ದಿದೆ. ಹೆದ್ದಾರಿ ಡಿವೈಡರ್ ಕೂಡ ಪೀಸ್ ಪೀಸ್ ಆಗಿದ್ದು, ಸೂಚನಾ ಫಲಕ ಸರ್ವೀಸ್ ರಸ್ತೆಗೆ ಬಿದ್ದಿದೆ. ಇತ್ತ ಕಾರಿನ ಅವಸ್ಥೆ ನೋಡಿದರೇ ಚಾಲಕ ಬದುಕಿದ್ದೇ ಪವಾಡ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!