March 15, 2026
Sunday, March 15, 2026
spot_img

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೋಳುಬೈಲ್ ಬಳಿ ಕಾರು ಪಲ್ಟಿ: ಮಗು ಸಹಿತ ಪ್ರಯಾಣಿಕರಿಗೆ ಗಾಯ


ಹೊಸದಿಗಂತ ಡಿಜಿಟಲ್ ಡೆಸ್ಕ್:


ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೋಳುಬೈಲು ಎಂಬಲ್ಲಿ ಕಾರು ಪಲ್ಟಿಯಾಗಿ ಸಹ ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.


ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಬೋಳುಬೈಲು ತಲುಪುತ್ತಿದ್ದಂತೆ ಮುಂಭಾಗದಲ್ಲಿ ಬಂದ ವಾಹನಕ್ಕೆ ಸೈಡ್ ನೀಡಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ಕಳೆದು ಕಾರು ಪಲ್ಟಿಯಾಗಿದ್ದು ಸಹ ಪ್ರಯಾಣಿಕರಾದ ಹೇಮಾ ಹಾಗೂ ಶ್ರೀಚಂದ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇವರ ಜೊತೆಗೆ ಪುಟ್ಟ ಮಗು ಹಾಗೂ ಚಾಲಕರು ಇದ್ದು ಈ ಪೈಕಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಇವರನ್ನು ಸ್ಥಳೀಯರು ಹಾಗೂ ಆಂಬ್ಯುಲೆನ್ಸ್ ಚಾಲಕರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !