ಅಲೆಯ ಅಬ್ಬರಕ್ಕೆ ತೇಲಿಬಂದ ಕಾರ್ಗೋಶಿಪ್‌ನ ಕಂಟೇನರ್‌ : ಮುಟ್ಟದಂತೆ ಜನರಿಗೆ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇರಳದ ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್‌ನಲ್ಲಿದ್ದ ಕೆಲವು ಕಂಟೇನರ್‌ಗಳು ಇಂದು ಬೆಳಗಿನ‌ ಜಾವ ಅಲೆಗಳ ಅಬ್ಬರಕ್ಕೆ ದಡ ಸೇರಿವೆ.

ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಕಾರ್ಗೋಶಿಪ್‌ನಲ್ಲಿ ಒಟ್ಟು 623 ಕಂಟೇನರ್‌ಗಳು ಇದ್ದವು. ಇದರಲ್ಲಿ 73 ಖಾಲಿ ಕಂಟೇನರ್‌ಗಳಾಗಿದ್ದವು. ಒಟ್ಟು 25 ಕಂಟೇನರ್‌ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್‌ಗಳು ಇದ್ದವು.

ಇವು ಜಲಚರಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಇನ್ನೂ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here