ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಕ್ಯಾರೆಟ್: ಎರಡು,
ಮೊಟ್ಟೆ: ನಾಲ್ಕು,
ಕ್ಯಾಪ್ಸಿಕಂ, ಟೊಮೆಟೊ, ಈರುಳ್ಳಿ : ಒಂದು ಕಪ್,
ಬೆಣ್ಣೆ: ಎರಡು ಚಮಚ,
ಉಪ್ಪು: ಸಾಕಷ್ಟು,
ಮೆಣಸಿನಪುಡಿ: ಒಂದು ಟೀಚಮಚ,
ಕಾಳುಮೆಣಸಿನ ಪುಡಿ: ಸಾಕಷ್ಟು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿದ ನಂತರ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಟೊಮೆಟೊ ತುಂಡುಗಳನ್ನು ಸೇರಿಸಿ, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ. ತಣ್ಣಗಾದ ಮಿಶ್ರಣಕ್ಕೆ ಮೊಟ್ಟೆ, ಮೆಣಸಿನಪುಡಿ, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಒಲೆಯ ಮೇಲೆ ಪಡ್ಡು ಮಾಡುವ ಬಾಣಲೆ ಇಟ್ಟು ಎಣ್ಣೆ/ಬೆಣ್ಣೆಯನ್ನು ಹಾಕಿ, ಅದು ಬಿಸಿಯಾದ ನಂತರ, ಮಿಶ್ರಣವನ್ನು ರಂಧ್ರಗಳಿಗೆ ಸುರಿಯಿರಿ ಮತ್ತು ಅದನ್ನು ಎರಡೂ ಬದಿಗಳಲ್ಲಿ ಫ್ರೈ ಮಾಡಿದರೆ ಕ್ಯಾರೆಟ್ ಎಗ್ ಪಡ್ಡು ರೆಡಿ.