ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಓಟ್ಸ್: ½ ಕಪ್,
ಕ್ಯಾರೆಟ್: ½ ಕಪ್,
ಈರುಳ್ಳಿ: ಒಂದು
ಬೆಣ್ಣೆ: ಒಂದು ಚಮಚ
ಉಪ್ಪು: ಸಾಕಷ್ಟು
ಮೆಣಸಿನ ಪುಡಿ: ಚಿಟಿಕೆ
ಕೊತ್ತಂಬರಿ ಸೊಪ್ಪು: ಸ್ವಲ್ಪ
ತಯಾರಿಸುವ ವಿಧಾನ:
ಮೊದಲು ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಎರಡು ಕಪ್ ನೀರು ಮತ್ತು ಸಣ್ಣದಾಗಿ ಕೊಚ್ಚಿದ ಈರುಳ್ಳಿಯೊಂದಿಗೆ ಮೃದುವಾಗುವವರೆಗೆ ಬೇಯಿಸಿ. ತಣ್ಣಗಾದ ನಂತರ ನುಣ್ಣಗೆ ಮಿಕ್ಸಿ ಮಾಡಿ. ಈಗ ಒಲೆಯ ಮೇಲೆ ಬಟ್ಟಲನ್ನು ಇಟ್ಟು ಬೆಣ್ಣೆಯನ್ನು ಹಾಕಿ, ಅದು ಬಿಸಿಯಾದ ಮೇಲೆ ಓಟ್ಸ್ ಸೇರಿಸಿ ಒಂದು ಕಪ್ ನೀರು ಹಾಕಿ ಎರಡು ನಿಮಿಷ ಬೇಯಿಸಿ. ಇದಕ್ಕೆ ಕ್ಯಾರೆಟ್ ಜ್ಯೂಸ್, ಬೇಕಾದಷ್ಟು ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿದರೆ, ಬಿಸಿ ಬಿಸಿ ಕ್ಯಾರೆಟ್ ಓಟ್ಸ್ ಸೂಪ್ ಸಿದ್ಧ. ಕೊನೆಗೆ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹಚ್ಚಿ ಉದುರಿಸಿ ಕುಡಿಯಿರಿ