ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ನೇಪಾಳದಿಂದ ವಿಶೇಷ ಸಾಲಿಗ್ರಾಮ ಬಂಡೆಗಳನ್ನು ತರಿಸಲಾಗಿದೆ.
ಈ ಅಪರೂಪದ ಬಂಡೆಗಳಿಂದ ರಾಮಮಂದಿರದ ಗರ್ಭಗುಡಿಯಲ್ಲಿ ನೆಲೆಸುವ ಭಗವಾನ್ ಶ್ರೀರಾಮ ಹಾಗೂ ಜಾನಕಿ ದೇವಿ ವಿಗ್ರಹವನ್ನು ಕೆತ್ತನೆ ಮಾಡುವ ಸಾಧ್ಯತೆ ಇದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧಾರ ಕೈಗೊಳ್ಳಲಿದೆ.
ಆರು ಕೋಟಿ ವರ್ಷ ಹಳೆಯದಾದ ಸಾಲಿಗ್ರಾಮಗ ಬಂಡೆಗಳಲ್ಲಿ ಒಂದು ಬಂಡೆ 26 ಟನ್ ತೂಕವಿದೆ, ಇನ್ನೊಂದು ಬಂಡೆ 14 ಟನ್ ತೂಕವಿದ್ದು, ಇದೀಗ ನೇಪಾಳದಿಂದ ಸಾಲಿಗ್ರಾಮ ಬಂಡೆಗಳನ್ನು ತರಿಸಿಕೊಳ್ಳಲಾಗಿದೆ. ನೇಪಾಳದ ಮುಸ್ತಾಂಗ್ ಜಿಲ್ಲೆಯ ಮುಕ್ತಿನಾಥ ಬಳಿಯ ನದಿಯಲ್ಲಿ ಈ ಬಂಡೆಗಳು ದೊರಕಿವೆ.
ಎರಡು ರೀತಿಯ ವಿಭಿನ್ನ ಟ್ರಕ್ಗಳನ್ನು ಬಳಸಿ ಬಂಡೆಗಳನ್ನು ತರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬಂಡೆಗಳನ್ನು ನೀಡುವ ಮುನ್ನ ರಾಮನ ಜನ್ಮಸ್ಥಳದಲ್ಲಿ ಅರ್ಚಕರು, ಸ್ಥಳೀಯರು ಸಾಲಿಗ್ರಾಮ ಬಂಡೆಗೆ ಪೂಜೆ ಸಲ್ಲಿಸಿದ್ದಾರೆ.