ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ದೇವರಕೊಂಡ ಪಹಲ್ಗಾಮ್ ದಾಳಿ ಬಗ್ಗೆ ನೀಡಿದ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಹಲ್ಗಾಂ ಉಗ್ರ ದಾಳಿಯನ್ನು ಭಾರತದ ಬಡುಕಟ್ಟ ಸಮುದಾಯ ಬಡಿದಾಟಕ್ಕೆ ಹೋಲಿಕೆ ಮಾಡಿ ಭಾರಿ ವಿರೋಧ ಎದುರಿಸುತ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ವಿರುದ್ದ ಪ್ರಕರಣ ದಾಖಲಾಗಿದೆ.
ಸೂರ್ಯ ಅಭಿನಯದ ರೆಟ್ರೋ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಮಾತನಾಡಿದ್ದರು. ಸ್ಟೇಜ್ ಮೇಲೆ ಹತ್ತಿ ಸಾವಿರಾರು ಜನರನ್ನು ನೋಡಿ ಮಾತನಾಡಿದ್ದಾರೆ. ಆದರೆ ವಿಜಯ್ ದೇವರಕೊಂಡ ಹೇಳಿದ ಮಾತುಗಳು ನಟನಿಗೆ ಮುಳುುವಾಗಿದೆ. ಪೆಹಲ್ಗಾಂ ಉಗ್ರ ದಾಳಿ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಬುಡುಕಟ್ಟ ಸಮುದಾಯದ ಬಡಿದಾಟಕ್ಕೆ ಹೋಲಿಕೆ ಮಾಡಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.