ಬಾಲಿವುಡ್ ಹಿರಿಯ ನಟ ಪರೇಶ್ ರಾವಲ್ ವಿರುದ್ಧ ಕೇಸ್: 25 ಕೋಟಿ ಪರಿಹಾರಕ್ಕೆ ಒತ್ತಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ನ ಹಿರಿಯ ನಟ ಪರೇಶ್ ರಾವಲ್ ವಿರುದ್ಧ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಮೊಕದ್ದಮೆ ದಾಖಲಿಸಿದ್ದು ಬರೋಬ್ಬರಿ 25 ಕೋಟಿ ರೂಪಾಯಿಗಳ ಪರಿಹಾರ ಕೊಡಬೇಕೆಂದು ಒತ್ತಾಯಿಸಿದೆ.

ಪರೇಶ್ ರಾವಲ್, ‘ಹೇರಾ ಪೇರಿ’ ಸಿನಿಮಾದ ಬಾಬು ಭಯ್ಯಾ ಪಾತ್ರದಿಂದಾಗಿ ಬಹಳ ಜನಪ್ರಿಯರು. ಬಾಬು ಭಯ್ಯ ಪಾತ್ರ ಪರೇಶ್ ರಾವಲ್ ಅವರಿಗೆ ಭಾರಿ ಜನಪ್ರಿಯತೆ ಮತ್ತು ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಟ್ಟಿದೆ. ಇತ್ತೀಚೆಗಷ್ಟೆ ನಿರ್ಮಾಣ ಸಂಸ್ಥೆಯಾದ ಕೇಪ್ ಆಫ್ ಗುಡ್ ಹೋಪ್ ಫಿಲಮ್ಸ್​ ‘ಹೇರಾ ಪೇರಿ 3’ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಚಾನಕ್ಕಾಗಿ ನಟ ಪರೇಶ್ ರಾವಲ್ ತಾವು ‘ಹೇರಾ ಪೇರಿ 3’ ಸಿನಿಮಾದಿಂದ ಹೊರ ನಡೆಯುತ್ತಿರುವುದಾಗಿ ಘೋಷಣೆ ಮಾಡಿದರು.

ಈ ಬಗ್ಗೆ ಟ್ವೀಟ್ ಮಾಡಿದ ಪರೇಶ್ ರಾವಲ್, ತಾವು ‘ಹೇರಾ ಪೇರಿ 3’ ಸಿನಿಮಾದಿಂದ ಹೊರಗೆ ಹೋಗುತ್ತಿರುವುದಾಗಿ ಹೇಳಿದರು. ಆದರೆ ತಮಗೆ ನಿರ್ದೇಶಕರೊಟ್ಟಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ನಿರ್ದೇಶಕ ಪ್ರಿಯದರ್ಶನ್ ಅವರನ್ನು ಬಹುವಾಗಿ ಗೌರವಿಸುತ್ತೇನೆ ಎಂದಿದ್ದಾರೆ.

ಇದು ನಿರ್ಮಾಣ ಸಂಸ್ಥೆ ಕೇಪ್ ಆಫ್ ಗುಡ್ ಹೋಪ್ ಫಿಲಮ್ಸ್​ಗೆ ಭಾರಿ ನಷ್ಟ ಉಂಟು ಮಾಡಿದೆ. ನಿರ್ಮಾಣ ಸಂಸ್ಥೆಯು ಈಗಾಗಲೇ ಸಿನಿಮಾಕ್ಕೆ ತಯಾರಿ ಆರಂಭಿಸಿತ್ತು. ಸಿನಿಮಾದ ಫೋಟೊಶೂಟ್ ಸಹ ಆಗಿತ್ತು. ಆದರೆ ಈಗ ಪರೇಶ್ ರಾವಲ್ ಸಿನಿಮಾದಿಂದ ಹೊರಗೆ ಹೋಗಿರುವುದು ನಿರ್ಮಾಣ ಸಂಸ್ಥೆಗೆ ಭಾರಿ ನಷ್ಟ ಉಂಟು ಮಾಡಿದೆ. ಇದೇ ಕಾರಣಕ್ಕೆ ನಿರ್ಮಾಣ ಸಂಸ್ಥೆಯು ಪರೇಶ್ ರಾವಲ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದೆ. ಬರೋಬ್ಬರಿ 25 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!