ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಕೆಲ ವರ್ಷಗಳಿಂದ ಪ್ರೀತಿಸಿ ಮದುವೆಯಾಗಿರುವುದು ಗೊತ್ತೇ ಇದೆ. ಅದಾದ ಬಳಿಕ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು, ಈಗ ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಸದಾ ಒಂದಿಲ್ಲೊಂದು ವಿವಾದದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಮತ್ತೊಂದು ವಿವಾದದಲ್ಲಿ ನಯನತಾರಾ ವಿಘ್ನೇಶ್ ಶಿವನ್ ಜೋಡಿ ಸುದ್ದಿಯಲ್ಲಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿರುದ್ಧ ಅವರ ಸ್ವಂತ ಕುಟುಂಬಸ್ಥರು ತಮಿಳುನಾಡು ತಿರುಚ್ಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಘ್ನೇಶ್ ಶಿವನ್ ಅವರ ತಂದೆ ಶಿವ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ನಿಧನರಾದರು. ಆದರೆ ವಿಘ್ನೇಶ್ ಚಿಕ್ಕಪ್ಪ ಆತ ಬದುಕಿದ್ದಾಗ ತನ್ನ ಸಹೋದರರ ಆಸ್ತಿಯನ್ನು ಮಾರಿ ಆ ಹಣವನ್ನೆಲ್ಲ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆಂದು ಪ್ರಕರಣ ದಾಖಲಿಸಿದ್ದರು.
ವಿಘ್ನೇಶ್ ತಂದೆ ಸಾವನ್ನಪ್ಪಿದ ಕಾರಣ ವಿಘ್ನೇಶ್ ಶಿವನ್, ಅವರ ತಾಯಿ, ಪತ್ನಿ ಮತ್ತು ಸಹೋದರಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮ್ಮ ಆಸ್ತಿ ಮತ್ತು ಅದಕ್ಕೆ ಸಂಬಂಧಿಸಿದ ಮೊತ್ತವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದು, ಈ ಸುದ್ದಿ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಆದರೆ ಇದುವರೆಗೂ ವಿಘ್ನೇಶ್ ಮತ್ತು ನಯನತಾರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.