ಕಣ್ಣೆದುರೇ ಮನಿ ಹೀಸ್ಟ್ ದೃಶ್ಯ, ರಸ್ತೆ ಮೇಲೆ ಕರೆನ್ಸಿ ನೋಟುಗಳ ಸುರಿಮಳೆಯ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

`ಮನಿ ಹೀಸ್ಟ್’ ವೆಬ್ ಸೀರೀಸ್ ಗೊತ್ತಿಲ್ಲದವರೇ ಇಲ್ಲ. ನಾಯಕ ಹಣ ಗಳಿಸುವ ಉದ್ದೇಶದಿಂದ ನೋಟುಗಳನ್ನು ತಯಾರಿಸಿ ಹೆಲಿಕಾಪ್ಟರ್‌ನಿಂದ ರಸ್ತೆಯ ಮೇಲೆ ಹಣದ ಸುರಿಮಳೆಯನ್ನೇ ಹರಿಸುತ್ತಾನೆ. ಇಂತಹ ದೃಶ್ಯವನ್ನೇ ಹೋಲುವ ಘಟನೆಯೊಂದು ನೋಯ್ಡಾದಲ್ಲಿ ನಡೆದಿದೆ. ಆದರೆ, ಇಲ್ಲಿ ಹೆಲಿಕಾಪ್ಟರ್‌ನ ಬದಲಾಗಿ ಕಾರಿನಿಂದ ಹಣ ರಸ್ತೆ ಮೇಲೆ ಎಸೆದಿರುವ ದೃಶ್ಯ ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

ನೊಯ್ಡಾ ನಗರದ ರಸ್ತೆಯಲ್ಲಿ ಬೆಂಗಾವಲು ವಾಹನಗಳು ಸಾಗುತ್ತಿದ್ದು, ಅವುಗಳ ಹಿಂದೆ ಬಂದ ಒಂದು ಕಾರಿನಿಂದ ಯುವಕರು ಹಣವನ್ನು ರಸ್ತೆ ಮೇಲೆ ಚೆಲ್ಲಿ, ಜೋರಾಗಿ ಕಿರುಚಾಟದ ಶಬ್ದವೂ ಕೇಳಿಬಂತು. ಈ ವಾಹನಗಳು ಸೆಕ್ಟರ್ -37 ರಿಂದ ನಗರ ಕೇಂದ್ರದ ಕಡೆಗೆ ಹೋಗುತ್ತಿದ್ದವು ಎಂದು ತಿಳಿದುಬಂದಿದೆ.

 ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಘಟನೆಯ ವಿರುದ್ಧ ಪ್ರಕರಣ ದಾಖಲಿಸಿ, ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಪ್ರತಿ ಕಾರಿನ ಮೇಲೆ ರೂ. 33,000 ದಂಡ ವಿಧಿಸಿದ್ದಾರೆ. ಯುವಕರು ಚೆಲ್ಲಾಪಿಲ್ಲಿಯಾಗಿ ಎಸೆದ ನೋಟುಗಳು ಅಸಲಿಯೇ ಅಥವಾ ನಕಲಿಯೇ? ಇದು ಇನ್ನೂ ದೃಢಪಟ್ಟಿಲ್ಲ ಹೀಗಾಗಿ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!