ಹೊಸದಿಗಂತ ವರದಿ ಹಾಸನ:
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಜಾತಿಗಣತಿ ವರದಿ ಕೊಟ್ಟಿದ್ದಾರೆ, ನಾವು ತೆಗೆದುಕೊಂಡಿದ್ದೇವೆ ಅಷ್ಟೇ. ರಿಪೋರ್ಟ್ನಲ್ಲಿ ಏನಿದೆ ಅಂತ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಾಸನ ಹೊರವಲಯದ ಬೂವನಹಳ್ಳಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ಅವರ ಜಾತಿಗಣತಿಗೆ ಹಲವರ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರದಿಯನ್ನು ಕ್ಯಾಬಿನೆಟ್ ಮುಂದೆ ಮಂಡಿಸಿ ಅದರಲ್ಲಿ ಏನಿದೆ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಸಿದ್ದಗಂಗಾ ಶ್ರೀಗಳು ಈಗ ಹೇಳುತ್ತಿದ್ದಾರೆ, ಮೊದಲು ಹೇಳಿದ್ದರೇ? ಎಂದು ಪ್ರಶ್ನಿಸಿದರು.
ಆಯೋಗದವರು ಎಲ್ಲರ ಅಭಿಪ್ರಾಯವನ್ನು ಕೇಳಿ ಮಾಡಿದ್ದೇವೆ ಅಂತ ಹೇಳ್ತಾರೆ, ಅದು ನನಗೆ ಗೊತ್ತಿಲ್ಲ, ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ ಎಂದರು.