ಕರಾವಳಿಯಲ್ಲಿ ಪ್ರಳಯಾಂತಕ ಮಳೆ: ಕೆತ್ತಿಕಲ್ ನಲ್ಲಿ ಭಾರೀ ಭೂಕುಸಿತ, ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಹೊಸದಿಗಂತ‌ ಡಿಜಿಟಲ್ ಡೆಸ್ಲ್:

ಮಂಗಳೂರು ನಗರ ಸೇರಿದಂತೆ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಂಗಳೂರಿನಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ನಗರದ ಹೊರವಲಯ ಕೆತ್ತಿಕಲ್‌ನಲ್ಲಿ ಭಾರೀ ಭೂಕುಸಿತ ಸಂಭವಿಸುತ್ತಿದೆ.

ಪರಿಣಾಮವಾಗಿ ಮಂಗಳೂರು, ಮೂಡುಬಿದಿರೆ, ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸಂಚಾರಕ್ಕೆ ಭಾಗಶಃ ಸ್ಥಗಿತವಾಗಿದೆ.

ರಾತ್ರಿ ವೇಳೆ ಪರಿಸ್ಥಿತಿ ಬಿಗಡಾಯಿಸಿಧದು, ಭೂಕುಸಿತ ಹೆಚ್ಚಿ ರಸ್ತೆಗೆ ಮಣ್ಣು ಉರುಳಿಬಿದ್ದ ಪರಿಣಾಮ ಒಂದು ಬದಿ ಸಂಪೂರ್ಣವಾಗಿ ಮುಚ್ಚಿಹೋಗಿ ವಾಹನಗಳು ಏಕಪಥ‌ ಸಂಚಾರ ನಡೆಸಿದವು.

ಕೆತ್ತಿಕಲ್ ಬೆಟ್ಟದ ಬಳಿ ಗುಡ್ಡ ಇನ್ನಷ್ಟು ಕುಸಿಯುವ ಸಾಧ್ಯತೆ ಕಂಡುಬರುತ್ತಿದ್ದು, ಸ್ಥಳಕ್ಕೆ ರಕ್ಷಣಾ ಪಡೆಗಳು ದೌಡಾಯಿಸಿವೆ. ಜಿಲ್ಲಾಡಳಿತ ನಿರಂತರ ಕಣ್ಗಾವಲಿರಿಸಿದ್ದು, ಸುರಕ್ಷತಾ ಕ್ರಮ‌ಕೈಗೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!