‘ಕಾವೇರಿ 2.0’ ವೆಬ್ ಸೈಟ್ ಸರ್ವರ್‌ ಡೌನ್‌ : ಆಸ್ತಿ ನೋಂದಣಿಗೆ ಜನರಿಗೆ ತೊಂದರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಾದ್ಯಂತ ಆಸ್ತಿ ನೋಂದಣಿ ಕಾರ್ಯ ಶನಿವಾರ ಮತ್ತು ಸೋಮವಾರ ಸ್ಥಗಿತಗೊಂಡಿದೆ. ಪ್ರಕ್ರಿಯೆಯನ್ನು ಸುಗಮಗೊಳಿಸುವ ವೆಬ್‌ಸೈಟ್‌ನ ಸರ್ವರ್ ಡೌನ್ ಆಗಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುಂಟಾಯಿತು ಎನ್ನಲಾಗಿದೆ.

ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. ಕಾವೇರಿ 2.0 ಪೋರ್ಟಲ್‌ಗೆ ಸರ್ವರ್ ಡೌನ್ ಆಗಿದ್ದು, 256 ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿಯ ಮೇಲೆ ಪರಿಣಾಮ ಬೀರಿದೆ. ನೋಂದಣಿಗಾಗಿ ವಾರಾಂತ್ಯದಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಬಯಸಿದ್ದವರಿಗೆ ಸಾಧ್ಯವಾಗಲಿಲ್ಲ. ಆಸ್ತಿಗಳ ಕಾಗದ ನೋಂದಣಿಗೆ ಅವಕಾಶವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸಮಸ್ಯೆಯನ್ನು ಸರಿಪಡಿಸಲು ಎಂಜಿನಿಯರ್‌ಗಳು ಸೋಮವಾರ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು. ಇಂದು ಸಮಸ್ಯೆ ಬಗೆಹರಿಯುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಆಸ್ತಿಯನ್ನು ನೋಂದಾಯಿಸಲು ಪ್ರಯತ್ನಿಸಿದ ಅಜಿತ್ ಆನಂದ್ ಅವರು ಎಕ್ಸ್ ಪೋಸ್ಟ್ ನಲ್ಲಿ ಶನಿವಾರ ಯಾವುದೇ ನೋಂದಣಿಗಳು ನಡೆದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!