October 16, 2026
Friday, October 16, 2026
spot_img

ಕಾವೇರಿದ ಕೇರಳ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಅಖಾಡಕ್ಕೆ ಸುರೇಂದ್ರನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳ ವಿಧಾನಸಭಾ ಚುನಾವಣೆ ಅಖಾಡ ಕಾವೇರುತ್ತಿದ್ದು, ಬಿಜೆಪಿ ತನ್ನ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನೇಮೊಮ್ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಹಿತ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ಈ ಬಾರಿ ಚುನಾವಣಾ ಕಣದಲ್ಲಿದ್ದಾರೆ.

ಮಂಜೇಶ್ವರದಿಂದ ಮತ್ತೆ ರಾಜ್ಯ ಪ್ರಮುಖ ನಾಯಕ ಕೆ. ಸುರೇಂದ್ರನ್ ಅವರು ಸ್ಪರ್ಧಿಸುತ್ತಿದ್ದು, ಕಾಂಜಿರಪಳ್ಳಿಯಲ್ಲಿ ಜಾರ್ಜ್ ಕುರಿಯನ್ ಜನತೆಯ ಮುಂದೆ ಚುನಾವಣಾ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಸ್ಪರ್ಧಿಸಿದ್ದ ನವ್ಯಾ ಹರಿದಾಸ್ ಅವರನ್ನು ಬಿಜೆಪಿ ಈ ಬಾರಿ ವಿಧಾನಸಭೆಯಲ್ಲಿ ಕಣಕ್ಕಿಳಿಸಿದೆ.

ಕೇರಳದಲ್ಲಿ ಒಟ್ಟು 140 ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ. ಮೇ 4ರಂದು ಫಲಿತಾಂಶ ಹೊರಬೀಳಲಿದೆ.

Must Read