ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದಲ್ಲಿ ಕಾವೇರಿ ವಿಚಾರಕ್ಕೆ ಪ್ರತಿಭಟನೆಗಳು ನಡೆಯುತ್ತಿದ್ದು, ನಿನ್ನ ತಡರಾತ್ರಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ರೈತರು ಧರಣಿ ನಡೆಸಿದ್ದಾರೆ.
ಮಂಡ್ಯ ಯೂತ್ ಗ್ರೂಪ್ ಪ್ರತಿಭಟನೆ ನಡೆಸಿದ್ದು, ತಮಿಳುನಾಡು ನೀರು ಬಿಡುಗಡೆ ವಿರೋಧಿಸಿದ್ದಾರೆ. ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಬಂದು ಹೋರಾಟ ಮಾಡಬೇಕಿತ್ತು. ನಮ್ಮಲ್ಲೇ ಒಗ್ಗಟ್ಟು ಇಲ್ಲದ್ದು ಬೇರೆ ರಾಜ್ಯಗಳಿಗೆ ಲಾಭ ಆಗಿದೆ ಎಂದು ರೈತರು ಹೇಳಿದ್ದಾರೆ.
ಈಗಾಗಲೇ 13 ಟಿಸಿಎಂ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ, ಇನ್ನು ನಿತ್ಯವೂ ಐದು ಸಾವಿರ ಕ್ಯುಸೆಕ್‌ನಂತೆ ನೀರು ಹರಿಸಿದರೆ ಕುಡಿಯಲು ಕೂಡ ನೀರು ಇರುವುದಿಲ್ಲ ಎಂದು ರೈತರು ಹೇಳಿದ್ದಾರೆ.