ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಹಂಚಿಕೆ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ (CWRC) ನಡೆಯಲಿದೆ.
ಇಂದು ಮಧ್ಯಾಹ್ನ 2:30ಕ್ಕೆ ವರ್ಚುಯಲ್ ಮೂಲಕ ಸಭೆ ನಡೆಯಲಿದ್ದು, ಕಾವೇರಿ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಭಾಗಿಯಾಗಲಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಕರ್ನಾಟಕದಲ್ಲಿ ನೀರಿಗೆ ಎದುರಾಗಿರುವ ತೊಂದರೆ ಮತ್ತು ತಮಿಳುನಾಡಿನಲ್ಲಿ ನೀರಿನ ಅವಶ್ಯಕತೆ ಎಷ್ಟಿದೆ ಎನ್ನುವುದರ ಬಗ್ಗೆ ಗಂಭೀರವಾದ ಪರಿಶೀಲನೆ ನಡೆಯಲಿದೆ.
ಕಳೆದ ತಿಂಗಳು CWRC ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಶಿಫಾರಸು ಮಾಡಿದ್ದು, ತೀರ್ಮಾನವನ್ನು ಪ್ರಾಧಿಕಾರ ಒಪ್ಪಿಕೊಂಡಿತ್ತು. ಸೆಪ್ಟೆಂಬರ್ 12ರವರೆಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ನಿರ್ದೇಶನ ನೀಡಿದ್ದು, ಪ್ರಾಧಿಕಾರ ನಿಗದಿಪಡಿಸಿದಷ್ಟು ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿತ್ತು.
ಇಂದಿನ ಸಭೆ ಹೆಚ್ಚು ಮಹತ್ವದ್ದಾಗಿದ್ದು, ಸಮಿತಿಯು ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಎರಡೂ ರಾಜ್ಯಗಳಿಗೂ ಕುತೂಹಲಕಾರಿ ಸಂಗತಿಯಾಗಿದೆ.