ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕಕ್ಕೆ ಮತ್ತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಧಿಕಾರ ಬಿಗ್ ಶಾಕ್ ನೀಡಿದ್ದು, ತಮಿಳುನಾಡಿಗೆ 2600 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ.
ಇಂದು ದೆಹಲಿಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸೋ ಸಂಬಂಧ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ನಮಗೆ ಕುಡಿಯಲು ನೀರಿಲ್ಲ. ಹೀಗಿದ್ದೂ ನೀರು ಹರಿಸಲು ಕಷ್ಟವಾಗುತ್ತಿದೆ ವಾದಿಸಿದರು.
ಕರ್ನಾಟಕದ ಅಧಿಕಾರಿಗಳ ವಾದಕ್ಕೆ ತೃಪ್ತಿಯಾಗದಂತ CWMA ನವೆಂಬರ್ 1ರಿಂದ 23ರವರೆಗೆ ಪ್ರತಿನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಈ ಮೂಲಕ CWRC ಆದೇಶವನ್ನು ಎತ್ತಿ ಹಿಡಿದು CWMA ಆದೇಶಿಸಿ, ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್ ಅನ್ನು ಕಾವೇರಿ ನದಿ ನೀರು ವಿಚಾರದಲ್ಲಿ ನೀಡಲಾಗಿದೆ.