ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರಿಯಾ ಫ್ರೌಡ ಶಿಕ್ಷಣ ಮಂಡಳಿ(CBSE) 10ನೇ ತರಗತಿ ಫಲಿತಾಂಶವನ್ನು ಪ್ರಕಟ ಮಾಡಿದೆ.
ಈ ಕುರಿತು ಮಂಡಳಿಯು ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು.
ಈ ವರ್ಷ 93.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಂಡಳಿಯು ತಿಳಿಸಿದೆ.
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ವೀಕ್ಷಿಸುವುದು ಹೇಗೆ ?:
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಾಗ್ ಇನ್ ಆಗಿ, ಮುಖಪುಟದಲ್ಲಿ ಕಾಣುವ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ವಿದ್ಯಾರ್ಥಿಗಳು ರೋಲ್ ನಂಬರ್, ಅಡ್ಮಿಟ್ ಕಾರ್ಡ್ ಐಡಿ, ಶಾಲಾ ಸಂಖ್ಯೆಯನ್ನು ನಮೂದಿಸಿ ಫಲಿತಾಂಶವನ್ನ ಪರಿಶೀಲಿಸಬಹುದು. ಅಲ್ಲದೇ ಫಲಿತಾಂಶಗಳು ಡಿಜಿಲಾಕರ್‌ನಲ್ಲಿಯೂ ಲಭ್ಯವಿರುತ್ತವೆ.