ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 12 ನೇ ತರಗತಿಯ ಬೋರ್ಡ್ ರಿಸಲ್ಟ್ ನಿನ್ನೆ ಪ್ರಕಟವಾಗಿದ್ದು, ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ದೆಹಲಿಯ ವಿದ್ಯಾರ್ಥಿ ಅರ್ಜುನ್ ಸಕ್ಸೇನಾ ಮೃತ ದೇಹವು ಪೇಯಿಂಗ್-ಗೆಸ್ಟ್ ವಸತಿಗೃಹದಲ್ಲಿ ಕೋಣೆಯೊಂದರಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉತ್ತರ ಪ್ರದೇಶದ ಇಟಾವಾದಿಂದ ಬಂದ ಮೃತ ಬಾಲಕ ಅರ್ಜುನ್ ಸಕ್ಸೇನಾ 12 ನೇ ತರಗತಿ ಪರೀಕ್ಷೆಯೊಂದಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಅರ್ಜುನ್ ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಖಿನ್ನತೆಗೆ ಜಾರಿದ್ದ ಎಂದು ಸ್ನೇಹಿತರು ಹೇಳಿದ್ದಾರೆ.