ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಉದ್ಯಮಿ ಓರ್ವನಿಗೆ ಹನಿ ಟ್ರ್ಯಾಕ್ ಮೂಲಕ ಹೆದರಿಸಿ ಸುಮಾರು 6 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ನಾಲ್ಕು ಜನರ ಗ್ಯಾಂಗನ್ನು ಬಂಧಿಸುವಲ್ಲಿ ಸಿ ಸಿ ಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ಕಲೀಮ್ ಮತ್ತು ಸಭಾ ಇಬ್ಬರು ಗಂಡ ಹೆಂಡತಿ ಎಂದು ಹೇಳಲಾಗುತ್ತಿದ್ದು, ಉದ್ಯಮಿಗೆ ಕಲೀಮ್ ತನ್ನ ಪತ್ನಿಯನ್ನು ವಿಧವೆ ಅಂತ ಪರಿಚಯಿಸಿದ್ದ ಎನ್ನಲಾಗುತ್ತದೆ.ನಂತರ ಆಕೆಯನ್ನ ನೀವೇ ನೋಡಿಕೊಳ್ಳುವಂತೆ ಹೇಳಿ, ಬಳಿಕ ದೈಹಿಕ ಸಂಪರ್ಕ ನಡೆದಿತ್ತು. ಈ ವೇಳೆ ಇದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಉದ್ಯಮಿ ಗೆ ಆರು ಲಕ್ಷ ರೂಪಾಯಿ ಬೇಡಿಕೆ ಇಟ್ಟು ಬೆದರಿಸಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನಾಲ್ವರನ್ನು ಬಂಧಿಸಿದೆ. ಖಲಿಂ,ಸಭಾ, ಓಬೇದ ರಕೀಮ್, ಅತೀಕ್ ಬಂಧಿತ ಆರೋಪಿಗಳಗಿದ್ದಾರೆ.