ಹೊಸದಿಗಂತ ವರದಿ,ಕಲಬುರಗಿ
ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರ ಮಿಂಚಿನ ದಾಳಿ ನಡೆಸಿ, ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ಕಾರ್ಪೊರೇಟರ್ ಸೇರಿದಂತೆ ಏಳು ಜನರ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ನಗರದ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ಶೆಡ್ವೊಂದರಲ್ಲಿ ಇಸ್ಪಿಟ್ ಆಡುತ್ತಿದ್ದ, ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 8ರ ಬಿಜೆಪಿ ಕಾರ್ಪೊರೇಟೆರ್ ಸಚೀನ್ ಕಡಗಂಚಿ, ವಿಶಾಲ್, ಆನಂದ್, ಮಹಾಂತೇಶ್, ಶಿವರಾಜ್, ಸಿದ್ದರಾಮ್, ಶರಣು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.
ಬಂಧಿತರಿಂದ 1 ಲಕ್ಷ ರೂ ನಗದು ಹಣ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳ ಜಪ್ತಿ ಮಾಡಲಾಗಿದೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.