ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರಿಗಾಗಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬೆನ್ನು ಬಿದ್ದಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಇದರ ಜೊತೆಗೆ ಹದಿನೆಂಟು ಅಕೌಂಟ್‌ಗಳ ಪರಿಶೀಲನೆ ವೇಳೆ ಬಹುತೇಕರು ಅಕೌಂಟ್‌ಗಳು ಡಿಲಿಟ್ ಮಾಡ್ಕೊಂಡಿದ್ದಾರೆ. ಇನ್ನೂ ಕೆಲವರು ಅಕೌಂಟ್‌ಗಳ ಜೊತೆಗೆ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಮಾಡ್ಕೊಂಡು ಎಸ್ಕೇಪ್ ಆಗಿದ್ದಾರೆ. ಹಾಗಾಗಿ ದೂರಿನಲ್ಲಿರುವ ಅಕೌಂಟ್‌ಗಳ ಖಾತೆಗಳ ಡಿಟೇಲ್ಸ್ ನೀಡುವಂತೆ ಇನ್ಸ್ಟಾ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಎರಡು ದಿನದಲ್ಲಿ ಆ ಎಲ್ಲಾ ಮಾಹಿತಿ ಸಿಗುವ ಸಾಧ್ಯತೆ ಇದೆ. ಆ ಡಿಟೇಲ್ಸ್ ಅಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಲು ಸಿದ್ಧತೆ ಮಾಡ್ಕೊಂಡಿದ್ದಾರೆ.
ಅಶ್ಲೀಲ ಕಾಮೆಂಟ್ ಮಾಡಿದವ್ರ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 18 ಖಾತೆಗಳಗಳ ವಿರುದ್ಧ ಐಟಿ ಕಾಯ್ದೆ ಹಾಗೂ ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಯಾವಾಗ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತಮ್ಮ ತಮ್ಮ ಅಕೌಂಟ್‌ಗಳು ದೂರಿನಲ್ಲಿ ಉಲ್ಲೇಖವಾಗಿವೆ ಅನ್ನೋದು ಗೊತ್ತಾಯ್ತೋ ಕೂಡಲೇ ಅಕೌಂಟ್ ಡಿಲೀಟ್ ಮಾಡಿ ಕೂತಿದ್ದಾರೆ.

