March 25, 2026
Wednesday, March 25, 2026
spot_img

ಸಿಸಿಬಿ ಪೊಲೀಸರ ರೇಡ್‌, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ತು 10 ಕೋಟಿ ರೂ. ಮೌಲ್ಯದ ಡ್ರಗ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಆರೋಪಿಗಳಾದ ಅಶ್ವಿನ್‌ ಹಾಗೂ ಮೊಬಿನಾರನ್ನು ಬಂಧಿಸಲಾಗಿದೆ. LSD, ಹೈಡ್ರೋ ಗಾಂಜಾ ಮತ್ತು ಚರಸ್​​ನ ಆರೋಪಿಗಳಿಂದ ಸೀಜ್​​ ಮಾಡಲಾಗಿದೆ. ಇವರು ದೇವರ ಚಿತ್ರ ಸೇರಿ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್ಟ್ ಮಾರಾಟ ಮಾಡುತ್ತಿದ್ದರು.

LSD ಸ್ಟ್ರಿಪ್ಸ್​​ಗಳನ್ನು ಕರ್ನಾಟಕದಲ್ಲಿ ವಶಪಡಿಸಿಕೊಂಡಿರೋದು ಇದೇ ಮೊದಲು ಎನ್ನಲಾಗಿದೆ. ಆರೋಪಿಗಳು ಡ್ರಗ್ಸ್‌ ಸಾಗಾಟಕ್ಕೆ ಮಾಸ್ಟರ್‌ ಪ್ಲಾನ್‌ ಮಾಡಿದ್ದರು. ಥೈಲೆಂಡ್‌ನಿಂದ ಇವರಿಗೆ ಡ್ರಗ್ಸ್‌ ಬರುತ್ತಿತ್ತು. ಅಲ್ಲಿಂದ ಹೇಗೆ ಡ್ರಗ್ಸ್‌ ಇಡಬೇಕು? ಎಲ್ಲಿ ಇಡಬೇಕು ಎನ್ನುವ ಮಾಹಿತಿ ಬರುತ್ತಿತ್ತು. ಅದರಂತೆಯೇ ಇವರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !