October 10, 2026
Saturday, October 10, 2026
spot_img

ಮತ್ತೆ ಸುದ್ದಿಗೆ ಬಂದ ಬಾಲಿವುಡ್ ಹಿನ್ನೆಲೆ ಗಾಯಕ: ಪಂಜಾಬಿ ನಟಿ ಜೊತೆ ಮದುವೆಯಾದ್ರಾ ಬಾದ್ ಶಾ? !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಗಾಯಕ ಬಾದ್‌ಶಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹಾಡಿನ ವಿಚಾರದಲ್ಲಿ ಅಲ್ಲ, ಬದಲಾಗಿ ತಮ್ಮ ವೈಯಕ್ತಿಕ ವಿಚಾರದಲ್ಲಿ.

ಬಾದ್‌ಶ ಖ್ಯಾತ ನಟಿಯೊಂದಿಗೆ ಎರಡನೇ ವಿವಾಹವಾಗಿದ್ದಾರೆ‌ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೆಳಿಬರುತ್ತಿದೆ.

ಈಗಾಗಲೇ ಮೊದಲ ಪತ್ನಿಯೊಂದಿಗೆ ವಿಚ್ಚೇದನ ಪಡೆದಿದ್ದ ಬಾದ್‌ಶಾ ಇದೀಗ ಆರು ವರ್ಷಗಳ ಬಳಿಕ ಮತ್ತೊಂದು ಪಂಜಾಬಿ ನಟಿ ಇಶಾ ರಿಖಿ ಅವರನ್ನು ವಿವಾಹರಾಗಿದ್ದಾರೆ ಎಂದು ಹೇಳಾಗುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಶಾ ರಿಖಿ ಅವರ ತಾಯಿ, ಮಗಳ ಮದುವೆಯ ಫೋಟೋಗಳನ್ನು ಹಂಚಿಗೊಂಡಿದ್ದು, ಸದ್ಯ ಎಲ್ಲೆಡೆ ಈ ಮದುವೆ ಫೋಟೋ ವೈರಲ್ ಆಗುತ್ತಿದೆ. ಆದರೆ ತಮ್ಮ ಮದುವೆ ಕುರಿತಾಗಿ ಇದುವರೆಗೆ ಬಾದ್‌ಶಾ ಹಾಗೂ ಇಶಾ ರಿಖಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

Must Read