ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಈಗ ಕದನ ವಿರಾಮ ಘೋಷಣೆಯನ್ನು ಮಾಡಿದೆ.
ಇದೇ ವೇಳೆ ಕದನ ವಿರಾಮಕ್ಕೆ ಯಾವುದೇ ಷರತ್ತುಗಳಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದ್ದು, ಕದನ ವಿರಾಮಕ್ಕೆ ಪೂರ್ವ ಅಥವಾ ನಂತರದ ಯಾವುದೇ ಷರತ್ತುಗಳಿಲ್ಲ. ಬದಲಿಗೆ ಪಾಕಿಸ್ತಾನದಿಂದಲೇ ಈ ಕದನ ವಿರಾಮಕ್ಕೆ ಕರೆ ಬಂದಿದೆ ಎಂದು ಹೇಳಿದೆ.
ಏತನ್ಮಧ್ಯೆ ಸೇನಾ ಸಂಘರ್ಷಕ್ಕೂ ಮುನ್ನ ಅಂದರೆ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಘೋಷಿಸಿದ್ದ ಸಿಂಧೂ ಜಲ ಒಪ್ಪಂದ ಅಮಾನತು ಮುಂದುವರೆಯಲಿದೆ ಎಂದೂ ಎಂಇಎ ಸ್ಪಷ್ಟಪಡಿಸಿದೆ.
ಈಗಾಗಲೇ ಸಿಂಧೂ ನದಿ ಪಾಕ್ಗೆ ಹೋಗದಂತೆ (Indus water) ಬಂದ್ ಮಾಡಲಾಗಿದೆ. ಅದನ್ನು ಯಾವುದೇ ಕಾರಣಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.