ಹೊಸದಿಗಂತ ವರದಿ, ಕಲಬುರಗಿ:
ನಗರದ ನೂತನ ವಿದ್ಯಾಲಯದ ಆವರಣದಲ್ಲಿ ರಥ ಸಪ್ತಮಿ ನಿಮಿತ್ತ ಕೇಶವ ಸೇವಾ ಸಮಿತಿ ಕಲಬುರಗಿ ವತಿಯಿಂದ 108 ಸೂರ್ಯ ನಮಸ್ಕಾರ ಯಜ್ಞ ಕಾಯ೯ಕ್ರಮ ಜರುಗಿತು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ,ಸುರೇಶ್ ಹೆರೂರ, ಸೂರ್ಯನ ರಥಕ್ಕೆ ಒಂದೆ ಚಕ್ರ. ಸೂಯ೯ನ ಸಾರಥಿ ಅರುಣನಿಗೆ ಒಂದೆ ತೊಡೆ. ಸೂರ್ಯ ದೇವರಿಗೆ ಎಲ್ಲವೂ ಅನುಕೂಲ ಪರಿಸ್ಥಿತಿಯೇ, ಹೀಗಿದ್ದರೂ ಸಹಿತ ಸೂರ್ಯ ಸದಾ ಕ್ರೀಯಾಶೀಲನಾಗಿ ಇರುತ್ತಾನೆ ಎಂದರು.
ಸೂರ್ಯನ ಆ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಅದರಂತೆ ಆರೋಗ್ಯಂ ಭಾಸ್ಕಾರಾದಿಚ್ಛೇತ ಎಂದ ಅವರು, ಸೂಯ೯ನಿಂದ ನಮಗೆ ಆರೋಗ್ಯ ಸಿಗುತ್ತದೆ ಎಂದರು.
ಹೀಗಾಗಿ ಸೂರ್ಯ ನಮಸ್ಕಾರ ಮಾಡುವುದು ನಮ್ಮ ಪರಂಪರೆಯಲ್ಲಿ ಬಂದಿದೆ ಎಂದು ಹೇಳಿ,ರಥ ಸಪ್ತಮಿ ಹಾಗೂ ಸೂರ್ಯ ನಮಸ್ಕಾರ, ದ ಮಹತ್ವ ತಿಳಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ,ಭಾರತ ರತ್ನ ದಿ.ಲತಾ ಮಂಗೇಶಕರ ಅವರಿಗೆ ಶೃಧ್ಧಾಂಜಲಿ ಸಲ್ಲಿಸಲಾಯಿತು. ಮಾನ್ಯ ಅಶೋಕ ಪಾಟೀಲ್ ಜೀ ಅವರು ಲತಾ ಜೀ ಬಗ್ಗೆ ಸ್ಮರಿಸಿದರು. 60ಕ್ಕೂ ಅಧಿಕ ಜನರು ಸೂರ್ಯ ನಮಸ್ಕಾರ ಯಜ್ಞ ದಲ್ಲಿ ಭಾಗವಹಿಸಿದ್ದರು.