ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಹಾಸ್ಯನಟಿ, ನಿರೂಪಕಿ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಡಿಸೆಂಬರ್ 19 ರಂದು ‘ಲಾಫ್ಟರ್ ಶೆಫ್’ ಸೆಟ್‌ನಲ್ಲಿ ಆರೋಗ್ಯ ಹದಗೆಟ್ಟ ನಂತರ ಭಾರತಿ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹಿಂದಿ ಕಿರುತೆರೆಯ ಖ್ಯಾತ ಜೋಡಿ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಮನೆಯಲ್ಲಿ ಮತ್ತೆ ಸಂತಸ ಮನೆಮಾಡಿದೆ. ಈ ಜೋಡಿ ಎರಡನೇ ಬಾರಿಗೆ ಪಾಲಕರಾಗಿದ್ದಾರೆ.
ಇಂಡಿಯಾ ಟುಡೇ ಪ್ರಕಾರ, ಭಾರತಿ ಸಿಂಗ್ ಡಿಸೆಂಬರ್ 19 ರಂದು ಬೆಳಿಗ್ಗೆ ‘ಲಾಫ್ಟರ್ ಶೆಫ್’ ಶೂಟಿಂಗ್‌ನಲ್ಲಿದ್ದರು. ಈ ಸಮಯದಲ್ಲಿ ಅವರ ವಾಟರ್ ಬ್ಯಾಗ್ ಒಡೆದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಭಾರತಿ ತಮ್ಮ ಮಗನಿಗೆ ಜನ್ಮ ನೀಡಿದರು.
ಹೆರಿಗೆಯ ಸಮಯದಲ್ಲಿ ಅವರ ಪತಿ ಹರ್ಷ್ ಲಿಂಬಾಚಿಯಾ ಭಾರತಿ ಸಿಂಗ್‌ರ ಜೊತೆಗಿದ್ದರು.
ಈ ಜೋಡಿ ಇದೇ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಪ್ರಗ್ನೆನ್ಸಿ ಬಗ್ಗೆ ಘೋಷಿಸಿದ್ದರು. ಭಾರತಿ ತಮ್ಮ ಸಂಪೂರ್ಣ ಗರ್ಭಾವಸ್ಥೆಯಲ್ಲಿಯೂ ಕೆಲಸ ಮಾಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗ ಕೂಡ ಅವರು ಸಂಪೂರ್ಣವಾಗಿ ಕೆಲಸ ಮಾಡಿದ್ದರು. ಈಗ ಅವರು ‘ಲಾಫ್ಟರ್ ಶೆಫ್ ಸೀಸನ್ 3’ ಎಂಬ ಅಡುಗೆ ಕಾಮಿಡಿ ಶೋನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು.
ಭಾರತಿ ಹಾಗೂ ಹರ್ಷ್ ಅವರು ಹೆಣ್ಣು ಮಗು ಬೇಕು ಎಂದು ಬಯಸಿದ್ದರು, ಅಂದಹಾಗೆ ಕಳೆದ ಏಪ್ರಿಲ್‌ನಲ್ಲಿ Laughter Chefs 2 ಶೋನಲ್ಲಿ ಜ್ಯೋತಿಷಿ ಸಂಜೀವ್ ಠಾಕೂರ್, ಸಾಕ್ಷಿ ಠಾಕೂರ್ ಅವರು ಭಾರತಿಗೆ ಎರಡನೇ ಮಗು ಆಗಲಿದೆ ಎಂದು ಹೇಳಿದ್ದರು. ಅದರಂತೆ ಮಗು ಆಗಿದೆ. ಈ ಬಾರಿಗೂ ಗಂಡಾದರೆ, ನಾವು ಪ್ರಯತ್ನ ಬಿಡೋದಿಲ್ಲ, ಮೂರನೇ ಮಗು ಪ್ಲ್ಯಾನ್ ಮಾಡೋದಾಗಿ ತಮಾಷೆಯಾಗಿ ಹೇಳಿತ್ತು.

