ಹೊಸ ದಿಗಂತ ವರದಿ, ಮಡಿಕೇರಿ:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೊಡಗು ಜಿಲ್ಲೆಗೆ ಆಗಮಿಸಿದ್ದಾರೆ.
ಕುಶಾಲನಗರ ಸಮೀಪದ ಕೊಪ್ಪ ಗೇಟ್ ಮೂಲಕ ಕೊಡಗಿಗೆ ಆಗಮಿಸಿದ ಅವರನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಹಾಜರಿದ್ದರು.
ಬಿಜೆಪಿಯಿಂದ ಸ್ವಾಗತ ವಿಶೇಷ ಭದ್ರತೆಯ ನಡುವೆ ಕುಶಾಲನಗರದ ಮೂಲಕ ಕೊಡಗು ಜಿಲ್ಲೆ ಪ್ರವೇಶಿಸಿದ ಕೇಂದ್ರ ಸಚಿವರನ್ನು ಕುಶಾಲನಗರ – ಕೊಪ್ಪ ಗಡಿಭಾಗದಲ್ಲಿ ಕುಶಾಲನಗರ ಬಿಜೆಪಿ, ಮಹಿಳಾ ಮೋರ್ಚಾ ಮತ್ತು ಕೊಪ್ಪ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.
ಇದು ಸಚಿವರ ಖಾಸಗಿ ಭೇಟಿಯಾಗಿದ್ದು, ತಮ್ಮ ಕುಟುಂಬ ಸದಸ್ಯರೊಂದಿಗೆ ಗುರುವಾರ ಪಾಲಿಬೆಟ್ಟದಲ್ಲಿ ತಂಗಲಿರುವ ಗಡ್ಕರಿ ಅವರು ಶುಕ್ರವಾರ ಮಡಿಕೇರಿಯ ಗಾಳಿಬೀಡು ಸಮೀಪದ ತಾಜ್ ರೆಸಾರ್ಟ್’ನಲ್ಲಿ ಮೂರು ದಿನಗಳ ಕಾಲ ತಂಗಲಿರುವುದಾಗಿ ಹೇಳಲಾಗಿದೆ.