ಬ್ಯಾನ್ ಆಗಿರುವ ಬೈಕ್ ಟ್ಯಾಕ್ಸಿ ಮರಳಿ ನಡೆಸಲು ಕೇಂದ್ರ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಟ್ಯಾಕ್ಸಿ ಚಾಲಕರು ಸಮರ ಸಾರಿದ್ದಾರೆ. ಈ ಹಂತದಲ್ಲಿ ಕೆಲವು ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಇದೀಗ ಕೇಂದ್ರ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಡೆಸಲು ಒಪ್ಪಿಗೆ ನೀಡಿದೆ.

ವೈಟ್ ಬೋರ್ಡ್‍ನಲ್ಲಿ ಬೈಸಿಕಲ್ ಟ್ಯಾಕ್ಸಿ ನಡೆಸಬಹುದು. ರಾಜ್ಯ ಸಾರಿಗೆ ಇಲಾಖೆ ಅನುಮತಿ ನೀಡಬಹುದು ಎಂದು ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ತಿಳಿಸಿದೆ.

ಇದು ಆಟೋ ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸಾರಿಗೆ ಇಲಾಖೆ ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು. ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸುವುದಾಗಿ ಚಾಲಕರು ಎಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!