mRNA ಆಧಾರಿತ ಕೊವಿಡ್ ಬೂಸ್ಟರ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ : ಇದು ಸೂಜಿ ಮುಕ್ತ ಇಂಜೆಕ್ಷನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಒಮಿಕ್ರಾನ್ ವಿರುದ್ಧ ನಿರ್ದಿಷ್ಟ mRNA ಆಧಾರಿತ ಬೂಸ್ಟರ್ ಲಸಿಕೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶನಿವಾರ ಬಿಡುಗಡೆ ಮಾಡಿದ್ದಾರೆ. GEMCOVAC-OM ಎಂಬ ಭಾರತದ ಮೊದಲ mRNA ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ಧನಸಹಾಯದೊಂದಿಗೆ ಜೆನೋವಾ ಸ್ಥಳೀಯ ಪ್ಲಾಟ್‌ಫಾರ್ಮ್ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಈ ಲಸಿಕೆ ತುರ್ತು ಬಳಕೆಯ ಅಧಿಕಾರಕ್ಕಾಗಿ (EUA) ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಕಚೇರಿಯಿಂದ ಅನುಮೋದನೆ ಪಡೆದಿದೆ.

ಕೊವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಸರ್ಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ ಡಿಬಿಟಿ ಮತ್ತು ಬಿಐಆರ್​​ಎಸಿ ಜಾರಿಗೊಳಿಸಿದ ಮಿಷನ್ ಕೊವಿಡ್ ಸುರಕ್ಷಾ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿದ ಐದನೇ ಲಸಿಕೆಯಾಗಿದೆ GEMCOVAC-OM. ತುಲನಾತ್ಮಕವಾಗಿ ಕಡಿಮೆ ಸಮಯದಲ್ಲಿ ಇತರ ಲಸಿಕೆಗಳನ್ನು ತಯಾರಿಸಲು ಈ ಫ್ಯೂಚರ್ ರೆಡಿ ತಂತ್ರಜ್ಞಾನ ವೇದಿಕೆ ಬಳಸಬಹುದು ಎಂದಿದ್ದಾರೆ ಸಚಿವ ಜಿತೇಂದ್ರ ಸಿಂಗ್.

GEMCOVAC-OM ಒಂದು ಥರ್ಮೋಸ್ಟೆಬಲ್ ಲಸಿಕೆಯಾಗಿದ್ದು ಇತರ ಅನುಮೋದಿತ mRNA-ಆಧಾರಿತ ಲಸಿಕೆಗಳಿಗೆ ಬಳಸಲಾಗುವ ಅಲ್ಟ್ರಾ-ಕೋಲ್ಡ್ ಚೈನ್ ಮೂಲಸೌಕರ್ಯದ ಅಗತ್ಯವಿರುವುದಿಲ್ಲ. ಸೂಜಿ-ಮುಕ್ತ ಇಂಜೆಕ್ಷನ್ ಡಿವೈಸ್ ಬಳಸಿಕೊಂಡು ಲಸಿಕೆಯನ್ನು ಇಂಟ್ರಾ ಡರ್ಮ್ (ಚರ್ಮದ ಒಳಗೆ) ನೀಡಲಾಗುವುದು ಎಂದು ಸಚಿವರು ಹೇಳಿದರು.

https://twitter.com/DrJitendraSingh/status/1672609418423455744?ref_src=twsrc%5Etfw%7Ctwcamp%5Etweetembed%7Ctwterm%5E1672609418423455744%7Ctwgr%5E1b1a542c94c849530bbfd14500b17d3f69c4c028%7Ctwcon%5Es1_&ref_url=https%3A%2F%2Ftv9kannada.com%2Fnational%2Funion-minister-jitendra-singh-launches-omicron-specific-mrna-based-booster-vaccine-for-covid-rak-608465.html

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!