August 24, 2026
Monday, August 24, 2026
spot_img

ಆರ್ಥಿಕತೆಯ ವಿನಾಶಕ್ಕೆ ಕೇಂದ್ರದ ಸಂಚು: 2026ರ ಬಜೆಟ್ ವಿರುದ್ಧ ದೀದಿ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026-27ರ ಕೇಂದ್ರ ಬಜೆಟ್ ಅನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಟುವಾಗಿ ಟೀಕಿಸಿದ್ದಾರೆ. ಈ ಬಜೆಟ್ ಅನ್ನು ಕೇವಲ “ಪದಗಳ ಕಸರತ್ತು” ಎಂದು ಬಣ್ಣಿಸಿರುವ ಅವರು, ಇದು ಯಾವುದೇ ನೈಜ ಉದ್ದೇಶವನ್ನು ಹೊಂದಿಲ್ಲ ಎಂದು ಕಿಡಿಕಾರಿದ್ದಾರೆ.

ಬಜೆಟ್ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇದೊಂದು ‘ಹಂಪ್ಟಿ-ಡಂಪ್ಟಿ’ ಬಜೆಟ್. ಇದರಲ್ಲಿ ಕೇವಲ ಪದಗಳ ಜಾಲವಿದೆಯೇ ಹೊರತು ಜನಸಾಮಾನ್ಯರಿಗೆ ಏನೂ ಇಲ್ಲ. ಇದು ಮಹಿಳಾ ವಿರೋಧಿ, ರೈತ ವಿರೋಧಿ ಮತ್ತು ಶಿಕ್ಷಣ ವಿರೋಧಿಯಾದ ಬಜೆಟ್ ಆಗಿದೆ,” ಎಂದು ಗುಡುಗಿದ್ದಾರೆ.

ಅಲ್ಲದೆ, “ಕೇಂದ್ರ ಸರ್ಕಾರವು ದೇಶದ ಆರ್ಥಿಕ ರಚನೆಯನ್ನೇ ನಾಶಮಾಡಲು ಹೊರಟಿದೆ,” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !