ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಮಲತಾಯಿ ಧೋರಣೆ ಯಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳಾಗಿದೆ. ಕೇಂದ್ರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲೇ ರಾಜ್ಯಕ್ಕೆ 83,000 ಕೋಟಿ ರು.ನಷ್ಟು ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
3,542 ಕೋಟಿ ರು.ಗಳ ಪೂರಕ ಅಂದಾಜು ಪ್ರಸ್ತಾವನೆ ಹಾಗೂ ಈ ಕುರಿತ ಕರ್ನಾಟಕ ಧನ ವಿನಿಯೋಗ (4) ವಿಧೇಯಕಕ್ಕೆ ಅಂಗೀಕಾರ ಕೋರಿ ಮಾತನಾಡಿದ ಅವರು, ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಈಗಾಗಲೇ ಬಸವರಾಜ ರಾಯರೆಡ್ಡಿ ಪ್ರಸ್ತಾಪಿಸಿರುವಂತೆ 2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 21.57 ಲಕ್ಷ ಕೋಟಿ ರು. ಇದ್ದಾಗ ರಾಜ್ಯಕ್ಕೆ ಕೇಂದ್ರದ ಅನುದಾನ, ತೆರಿಗೆ ಪಾಲು 58,753 ಕೋಟಿ ರು. ಬಂದಿತ್ತು. 2019-20ರಲ್ಲಿ 27,86 ಲಕ್ಷ ಕೋಟಿ ರು. ಬಜೆಟ್‌ನಲ್ಲಿ 61,786 ಕೋಟಿ ರು. ರಾಜ್ಯಕ್ಕೆ ಬಂದಿತ್ತು.
ಆದರೆ 15ನೇ ಹಣಕಾಸು ಆಯೋಗದ ವರದಿ ಯಲ್ಲಿ ಆದ ತಾರತಮ್ಯದಿಂದ 2023-24ರಲ್ಲಿ ಕೇಂದ್ರದ ಬಜೆಟ್ ೪೫.೦೩ ಲಕ್ಷ ಕೋಟಿ ರು. ಇದ್ದರೂ 50,257 ಕೋಟಿ ರು. ಮಾತ್ರ ಬಂದಿದೆ. ತನ್ಮೂಲಕ ಅಂದಾಜು 73 ಸಾವಿರ ಕೋಟಿ ರು. ನಷ್ಟ ಉಂಟಾಗಿದೆ.
ಜೊತೆಗೆ 2023ರ ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆ ಯೋಜನೆಯಡಿ ಕೇಂದ್ರ 5,100 ಕೋಟಿ ರು. ನೀಡುವು ದಾಗಿ ಹೇಳಿದ್ದರು. ಈವರೆಗೆ ಹಣ ಬಂದಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ೫,೪೯೫ ಕೋಟಿ ರು. ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿಕೆ ನೀಡಿಲ್ಲ ಎಂದರು.