ಪಂಚ ರಾಜ್ಯ ಚುನಾವಣೆ: ರೋಡ್ ಶೋ, ರ್‍ಯಾಲಿಗಳ ಮೇಲಿನ ನಿರ್ಬಂಧವನ್ನು ಮತ್ತೆ ವಿಸ್ತರಿಸಿದ ಕೇಂದ್ರ ಚುನಾವಣಾ ಆಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚ ರಾಜ್ಯ ಚುನಾವಣೆಗೆ ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಗೆಲುವಿಗೆ ನಾನಾ ಪಕ್ಷಗಳು ಹರಸಾಹಸಪಡುತ್ತಿದೆ.

ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಫೆಬ್ರವರಿ 11ರವರೆಗೆ ಯಾವುದೇ ರೀತಿಯ ರೋಡ್​ ಶೋ ಹಾಗೂ ರ್‍ಯಾಲಿ ನಡೆಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಈಗಾಗಲೇ ದೇಶದಲ್ಲಿ ಕೊರೋನಾ, ಒಮಿಕ್ರಾನ್​​ ಹೆಚ್ಚಾಗುತ್ತಿರುವ ಕಾರಣ ಆಯೋಗ ಜನವರಿ 15ರವರೆಗೆ ಸಾರ್ವಜನಿಕ ರ್‍ಯಾಲಿ, ರೋಡ್ ಶೋಗಳು ಮತ್ತು ಪ್ರಚಾರ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿತ್ತು. ಇದಾದ ಬಳಿಕ ಈ ದಿನಾಂಕವನ್ನ ಜನವರಿ 31ರವರೆಗೆ ವಿಸ್ತರಣೆ ಮಾಡಿತ್ತು.ಇದೀಗ ಮತ್ತೆ ಆಯೋಗ ಫೆ.11ರವರೆಗೆ ಇದನ್ನ ಮುಂದುವರಿಕೆ ಮಾಡಿದೆ.

ಆದರೂ ಚುನಾವಣಾ ಆಯೋಗ ಕೆಲವೊಂದು ಸಡಲಿಕೆಯನ್ನು ನಿಡುದ್ದು, ಅಭ್ಯರ್ಥಿಗಳು ಪ್ರಚಾರ ನಡೆಸಲು ಗರಿಷ್ಠ ಸಾವಿರ ಜನರೊಂದಿಗೆ ರ್‍ಯಾಲಿ ನಡೆಸಲು ಅನುಮತಿ ನೀಡಿದ್ದು, ಒಳಾಂಗಣ ಸಭೆಯಲ್ಲಿ ಗರಿಷ್ಠ 500 ಜನರು ಹಾಗೂ ಮನೆ ಮನೆ ಪ್ರಚಾರಕ್ಕೆ 20 ಜನರಿಗೆ ಅವಕಾಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!