75 ಲಕ್ಷ ಹೆಚ್ಚುವರಿ LPG ಸಂಪರ್ಕಗಳಿಗೆ ಕೇಂದ್ರ ಸರಕಾರ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಸಂಪುಟ ಇಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಹೆಚ್ಚುವರಿ ಎಲ್ ಪಿಜಿ (LPG) ಸಂಪರ್ಕಗಳಿಗೆ ಅನುಮೋದನೆ ನೀಡಿದೆ.

ಉಜ್ವಲ ಯೋಜನೆಯಡಿ ಹೊಸ 75,000 ಎಲ್ಪಿಜಿ ಸಂಪರ್ಕಕ್ಕಾಗಿ 1650 ಕೋಟಿ ರೂ.ಗಳ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಅದೇ ರೀತಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ, ಎಲ್ ಪಿಜಿ ಸಿಲಿಂಡರ್’ನ ಬೆಲೆ 400 ರೂಪಾಯಿ ಇಳಿಕೆಯಾಗಿದ್ದು, ಬೆಲೆ ಕಡಿತವಾಗಿ 200 ರೂ ಮತ್ತು ಸಬ್ಸಿಡಿಯಾಗಿ 200 ರೂಪಾಯಿ ಆಗಿದೆ.

ಭಾರತದಲ್ಲಿ ಒಟ್ಟು ಉಜ್ವಲ ಫಲಾನುಭವಿಗಳ ಸಂಖ್ಯೆಯನ್ನು 10 ಕೋಟಿ ದಾಟಿದೆ. ಪ್ರಸ್ತುತ, 9.59 ಕೋಟಿ ಉಜ್ವಲ ಯೋಜನೆಯ ಫಲಾನುಭವಿಗಳಿದ್ದಾರೆ.ಪಿಎಂ ಉಜ್ವಲ ಯೋಜನೆ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಬಿಪಿಎಲ್ ಕುಟುಂಬಗಳು ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಗುರಿಯನ್ನು ಹೊಂದಿದೆ.

5 ಕೋಟಿ ಹೊಸ ಅನಿಲ ಸಂಪರ್ಕಗಳನ್ನು ವಿತರಿಸುವ ಉದ್ದೇಶದಿಂದ ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು.

ಉಜ್ವಲ ಅನಿಲ ಯೋಜನೆಯ ಪ್ರಯೋಜನಗಳು
ಈ ಯೋಜನೆಯು ಸದಸ್ಯರಿಗೆ ವರ್ಷಕ್ಕೆ 12 ಸಿಲಿಂಡರ್ಗಳವರೆಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.ಸಿಲಿಂಡರ್ ಮೊತ್ತವನ್ನು ಯೋಜನೆಯ ಸದಸ್ಯರ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!