ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ದೇಕಾ ಅವರನ್ನು 2026ರ ಜೂನ್ ವರೆಗೆ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ಮುಂದುವರಿಯಲಿ. ಮುಂದಿನ ಆದೇಶದವರೆಗೆ ಅವರ ಅವಧಿ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್ ನೇಮಕಾತಿ ಸಮಿತಿ ಮಂಗಳವಾರ ತನ್ನ ಆದೇಶದಲ್ಲಿ ತಿಳಿಸಿದೆ.
ದೇಕಾ ಅವರು 1988-ಬ್ಯಾಚ್ ಇಂಡಿಯನ್ ಪೊಲೀಸ್ ಸೇವೆ (ಐಪಿಎಸ್) ಹಿಮಾಚಲ ಪ್ರದೇಶದ ಕೇಡರ್‌ನ ಅಧಿಕಾರಿಯಾಗಿದ್ದು, ಭಯೋತ್ಪಾದನೆ ಮತ್ತು ಆಮೂಲಾಗ್ರೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣತಿ ಹೊಂದಿದ್ದಾರೆ.
2022 ರ ಜೂನ್ ತಿಂಗಳಲ್ಲಿ ಇವರನ್ನು ಎರಡು ವರ್ಷಗಳ ಅವಧಿಗೆ ಗುಪ್ತಚರ ಬ್ಯೂರೋದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 2024 ರ ಜೂನ್‌ನಲ್ಲಿ ಒಂದು ವರ್ಷದವರೆಗೆ ಅವಧಿ ವಿಸ್ತರಿಸಲಾಗಿತ್ತು. ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ದೇಕಾ ಎರಡು ದಶಕಗಳ ಕಾಲ ಐಬಿಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು.