ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಬರ್, ಓಲಾ, ರ್ಯಾಪಿಡೋ ಇನ್ನಿತರ ಪ್ರೈವೇಟ್ ಆ್ಯಪ್ ಆಧಾರಿತ ಕಂಪನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಉಬರ್, ಓಲಾ ಮತ್ತು ರ್ಯಾಪಿಡೊದಂತಹ ಆ್ಯಪ್ ಆಧಾರಿತ ಕ್ಯಾಬ್‌ಗಳಿಗೆ ಪೀಕ್ ಅವರ್ನಲ್ಲಿ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದೆ. ಈ ಹಿಂದೆ ಒಂದೂವರೆ ಪಟ್ಟು ಮಾತ್ರ ಶುಲ್ಕ ವಿಧಿಸಲು ಅವಕಾಶ ಇತ್ತು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ ಮೋಟಾರು ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025ರಲ್ಲಿ ಪೀಕ್ ಅವರ್ ಅಲ್ಲದ ಸಮಯದಲ್ಲಿ ಮೂಲ ದರದ ಕನಿಷ್ಠ ಶೇಕಡಾ 50 ಇರಬೇಕು ಎಂದು ಹೇಳಿದೆ.
ಮೂಲ ದರಕ್ಕಿಂತ ಕನಿಷ್ಠ ಶೇಕಡಾ 50 ರಷ್ಟು ಕಡಿಮೆ ಇರಬೇಕು ಮತ್ತು ಪೀಕ್ ಅವರ್ನಲ್ಲಿ ನಿರ್ದಿಷ್ಟಪಡಿಸಿದ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಅಗ್ರಿಗೇಟರ್‌ಗೆ ಅನುಮತಿ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.