ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ಕೊಹ್ಲಿ ಅಬ್ಬರ ಜೋರಾಗಿತ್ತು. ತಮ್ಮ ಹುಟ್ಟುಹಬ್ಬದಂದೇ ಕೊಹ್ಲಿ 49ನೇ ಏಕದಿನ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಶಕಗಳ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅತಿಹೆಚ್ಚು ಏಕದಿನ ಶತಕ ದಾಖಲೆಗೆ ಸರಿಸಮಾನರಾದರು.
ಸಚಿನ್ ತೆಂಡುಲ್ಕರ್ 463 ಪಂದ್ಯಗಳ 452 ಇನಿಂಗ್ಸ್ಗಳನ್ನಾಡಿ 49 ಏಕದಿನ ಶತಕ ಸಿಡಿಸದರೆ, ವಿರಾಟ್ ಕೊಹ್ಲಿ ಕೇವಲ 289 ಪಂದ್ಯಗಳ 277 ಇನಿಂಗ್ಸ್ಗಳನ್ನಷ್ಟೇ ಆಡಿ 49ನೇ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.
ಆರಂಭದಿಂದಲೇ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಹುಟ್ಟುಹಬ್ಬದಂದೇ 50+ ರನ್ ಬಾರಿಸಿದ ಭಾರತದ ಆರನೇ ಬ್ಯಾಟರ್ ಎನಿಸಿಕೊಂಡರು.
ಏಕದಿನ ಕ್ರಿಕೆಟ್ನಲ್ಲಿ ಹುಟ್ಟುಹಬ್ಬದಂದು 50+ ರನ್ ಬಾರಿಸಿದ ಭಾರತ ಬ್ಯಾಟರ್ಗಳಿವರು:
ಸಚಿನ್ ತೆಂಡುಲ್ಕರ್(25ನೇ ಹುಟ್ಟುಹಬ್ಬ)
ವಿನೋದ್ ಕಾಂಬ್ಳಿ(21ನೇ ಹುಟ್ಟುಹಬ್ಬ)
ನವಜೋತ್ ಸಿಂಗ್ ಸಿಧು(31ನೇ ಹುಟ್ಟುಹಬ್ಬ)
ಇಶಾನ್ ಕಿಶನ್(23ನೇ ಹುಟ್ಟುಹಬ್ಬ)
ಯೂಸುಫ್ ಪಠಾಣ್(26ನೇ ಹುಟ್ಟುಹಬ್ಬ)
ವಿರಾಟ್ ಕೊಹ್ಲಿ(35ನೇ ಹುಟ್ಟುಹಬ್ಬ)
ವಿರಾಟ್ ಕೊಹ್ಲಿ 119 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ ಮೂರಂಕಿ ಮೊತ್ತ ದಾಖಲಿಸಿ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು.