ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಎಲಾನ್ ಮಸ್ಕ್ ಒಡೆತದನ ಎಕ್ಸ್ (ಟ್ವಿಟರ್) ಸಂಸ್ಥೆಯ ಸಿಇಒ ಲಿಂಡಾ ಯಕರಿನೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 61 ವರ್ಷದ ಲಿಂಡಾ ಇದೀಗ ದಿಢೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎಕ್ಸ್ ಮೂಲಕ ತಮ್ಮ ರಾಜೀನಾಮೆಯನ್ನು ಘೋಷಿಸಿದ ಲಿಂಡಾ, ಎರಡು ಅದ್ಭುತ ವರ್ಷಗಳ ಬಳಿಕ ನಾನು ಎಕ್ಸ್ ಸಿಇಒ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಎಲಾನ್ ಮಸ್ಕ್ ಎಕ್ಸ್ ಪರಿಕಲ್ಪನೆ ಹಾಗೂ ಹೊಸ ದೃಷ್ಟಿಕೋನದ ಕುರಿತು ಹೇಳಿದಾಗ ಇದು ಅತ್ಯುತ್ತಮ ಅವಕಾಶ ಎಂದು ಭಾವಿಸಿ ನಾನು ಸೇರಿಕೊಂಡೆ. ಕಾರಣ ಇಂತಹ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಸಿಗಲಿದೆ. ಎಕ್ಸ್ ಕಂಪನಿಗೆ ಹೊಸ ರೂಪ ಕೊಡುವ, ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹೊಸತನ ತರಲು ಸಂಪೂರ್ಣ ಜವಾಬ್ದಾರಿಯನ್ನು ಮಸ್ಕ್ ನನಗೆ ನೀಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಎಕ್ಸ್ ಟೀಂ ಬಗ್ಗೆ ಕೆಲಸ ಮಾಡಿದ್ದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ನಾವು ತಂಡವಾಗಿ ಸಾಧಿಸಿದ ಬ್ಯೂಸಿನೆಸ್ ಮಾಡೆಲ್ ಎಕ್ಸ್‌ಗೆ ಹೊಸ ಏಳಿಗೆ ನೀಡಿದೆ. ಪ್ರಮುಖವಾಗಿ ಬಳಕೆದಾರರ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳು, ಅದರಲ್ಲೂ ಮಕ್ಕಳ ಬಳಕೆ ಸುರಕ್ಷತೆ, ಜಾಹೀರಾತುದಾರರ ವಿಶ್ವಾಸಾರ್ಹತೆ ಮರಳಿ ಪಡೆಯಲು ತೆಗೆದುಕೊಂಡು ಮಹತ್ವದ ಬದಲಾವಣೆ ಎಕ್ಸ್ ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಹೊಸ ಆವಿಷ್ಕಾರ ಸೇರಿದಂತೆ ಹಲವು ಬದಲಾವಣೆ ತರಲಾಗಿದೆ. ಆದರೆ ಎಕ್ಸ್‌ನ ಅತ್ಯುತ್ತಮ ಸೇವೆ ಇನ್ನು ಬರಲಿದೆ, ಕಾರಣ ಎಕ್ಸ್ ಇದೀಗ @xai ಪ್ರವೇಶಿಸುತ್ತಿದೆ. ಎಲ್ಲರ ಬೆಂಬಲ, ಬಳಕೆದಾರರು, ವ್ಯಾಪಾರ ಪಾಲುದಾರರು ಸೇರಿದಂತೆ ಎಲ್ಲರ ಬೆಂಬಲದಿಂದ ಇದು ಸಾಧ್ಯವಾಗಿದೆ. ಎಲ್ಲರನ್ನು ಎಕ್ಸ್‌ನಲ್ಲಿ ಬೇಟಿಯಾಗುತ್ತೇನೆ ಎಂದು ಲಿಂಡಾ ಯಕರಿನಾ ಹೇಳಿದ್ದಾರೆ.