ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಎಲ್ಲಿಯಾದರೂ, ಲಿಫ್ಟ್ ಇದ್ದಕ್ಕಿದ್ದಂತೆ ಕೆಟ್ಟು ನಿಂತರೆ ಅಂತಹ ಸಮಯದಲ್ಲಿ ಗಾಬರಿಯಾಗದೆ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಹೆಚ್ಚು ಮಹಡಿಗಳನ್ನು ಹೊಂದಿರುವ ಕಟ್ಟಡ ಹತ್ತಲು ಸಾಧ್ಯವಾಗದೆ ಖಂಡಿತವಾಗಿಯೂ ಲಿಫ್ಟ್ ಅನ್ನು ಬಳಸುತ್ತೇವೆ. ಆ ಸಂದರ್ಭದಲ್ಲಿ ಅಚಾನಕ್ ಆಗಿ ಲಿಫ್ಟ್ ನಿಂತರೆ ಕೆಲವರು ಬಾಗಿಲು ಹೊಡೆಯುವುದು, ಜೋರಾಗಿ ಕೂಗುವುದು ಮಾಡಿ ಭಯಕ್ಕೆ ಒಳಗಾಗುತ್ತಾರೆ. ಹಾಗೆ ಮಾಡದೆ ಲಿಪ್ಟ್ ಅದಾಗಿಯೇ ತೆರೆಯುವವರೆಗೆ ಕಾಯಿರಿ. ಲಿಫ್ಟ್‌ನಿಂದ ಇಳಿಯುವಾಗ ಹಿರಿಯರು ಮತ್ತು ಮಕ್ಕಳನ್ನು ಮೊದಲು ಕೆಳಗೆ ಇಳಿಸಿ. ಯಾರನ್ನೂ ತಳ್ಳಬೇಡಿ.
ನೀವು ಆಗಾಗ್ಗೆ ಲಿಫ್ಟ್ ಅನ್ನು ಬಳಸುತ್ತಿದ್ದರೆ ಅದರ ಸಾಮರ್ಥ್ಯ ಏನು ಎಂದು ನೀವು ನಿಖರವಾಗಿ ತಿಳಿದುಕೊಳ್ಳಬೇಕು. ಇದರ ತೂಕದ ಮಿತಿಗಳನ್ನು ಲಿಫ್ಟ್ ಒಳಗೆ ಅಥವಾ ಹೊರಗೆ ಲೇಬಲ್ ಮೇಲೆ ಹಾಕಿರುತ್ತಾರೆ. ಮನೆಗಳಲ್ಲಿ ಬಳಸುವ ಲಿಫ್ಟ್‌ಗಳು ವಾಣಿಜ್ಯ ಸಂಸ್ಥೆಗಳಲ್ಲಿ ಬಳಸುವ ಲಿಫ್ಟ್‌ಗಳಿಗಿಂತ ಕಡಿಮೆ ಪರಿಣಾಮಕಾರಿ. ಲಿಫ್ಟ್ ಮಿತಿ ಮೀರಿ ಓವರ್ಲೋಡ್ ಆಗಿದ್ದರೆ ಕೇಬಲ್ಗಳು ಒಡೆಯುವ ಅಪಾಯವಿದೆ.
ಲಿಫ್ಟ್‌ನಲ್ಲಿನ ದೀಪಗಳ ಬಗ್ಗೆ ತಿಳಿಯದೆ ಆನ್ ಅಥವಾ ಆಫ್ ಮಾಡಬೇಡಿ. ಸ್ಟಾಪ್ ಬಟನ್ ಅನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಲಿಫ್ಟ್ ಇದ್ದಕ್ಕಿದ್ದಂತೆ ನಿಂತರೆ ಗಾಬರಿಯಾಗಬೇಡಿ. ಅಲಾರಾಂ ಬಟನ್ ಒತ್ತಿದರೆ ಸೆಕೆಂಡುಗಳಲ್ಲಿ ಸಹಾಯ ಸಿಗುತ್ತದೆ. ಲಿಫ್ಟ್ ಬಾಗಿಲುಗಳನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಬೇಡಿ. ಹಾಗೆಯೇ ಮುಚ್ಚುವ ಲಿಫ್ಟ್ ಬಾಗಿಲುಗಳನ್ನು ನಿಮ್ಮ ಕೈಗಳಿಂದ ನಿಲ್ಲಿಸಲು ಪ್ರಯತ್ನಿಸಬೇಡಿ. ಲಿಫ್ಟ್ ಸೆನ್ಸರ್ ಕೆಲಸ ಮಾಡದಿದ್ದರೆ ಕೈಗಳು ಬಾಗಿಲುಗಳ ನಡುವೆ ಸಿಲುಕಿಕೊಳ್ಳುವ ಅಪಾಯವಿದೆ ಇದೆ ತುರ್ತು ಸಹಾಯಕ್ಕಾಗಿ ಕರೆ ಮಾಡಲು ಲಿಫ್ಟ್ ಫೋನ್ ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.
ಮಕ್ಕಳೊಂದಿಗೆ ಲಿಫ್ಟ್ ನಲ್ಲಿರುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲಿಫ್ಟ್‌ನಲ್ಲಿ ಕರೆದೊಯ್ಯಬೇಡಿ. ಲಿಫ್ಟ್‌ನಲ್ಲಿ ಹೋಗುವಾಗ ಇಂತಹ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅಗತ್ಯ.