ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಬರೆ ಬೀಳುತ್ತಲೇ ಇದೆ. ಮೆಟ್ರೋ, ಹಾಲು ದರ ಏರಿಕೆ ನಂತರ ಇದೀಗ ಕಸಕ್ಕೂ ಹೆಚ್ಚೆಚ್ಚು ಟ್ಯಾಕ್ಸ್ ಕಟ್ಟುವ ಸಮಯ ಸಮೀಪಿಸಿದೆ.
ನಾಳೆಯಿಂದ ಕಸದ ಮೇಲೆ ಸೆಸ್ ಜಾರಿ ಆಗಲಿದೆ.ಮನೆ ಮನೆ ಕಸ ಸಂಗ್ರಹಿಸಲು ಇನ್ನೂ ಮುಂದೆ ತೆರಿಗೆ ಕಟ್ಟಬೇಕು. ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಕಸದ ಮೇಲೆ ಸೆಸ್ ವಿಧಿಸಲಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಎಂದು ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದೆ. ಅಂಗಡಿ, ಹೋಟೆಲ್‍ಗಳಿಗೆ ಒಂದು ತೆರಿಗೆ, ರೆಸಿಡೆನ್ಷಿಯಲ್ ಕಟ್ಟಡಗಳಿಗೆ ಮತ್ತೊಂಡು ರೀತಿ ಕಸದ ಸೆಸ್ ವಿಧಿಸಲು ನಿರ್ಧರಿಸಲಾಗಿದೆ.
ಹೋಟೆಲ್‍ಗಳಿಗೆ ಮೊದಲು ಒಂದು ಕೆಜಿ ಕಸಕ್ಕೆ 5 ರೂ. ನಿಗದಿ ಮಾಡಲಾಗಿತ್ತು. ಈಗ 12 ರೂ.ಗೆ ಏರಿಸಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಕಸಕ್ಕೆ ಸೆಸ್ ಹಾಕಲಿದ್ದಾರೆ. ಆಸ್ತಿ ತೆರಿಗೆಯಲ್ಲಿ ಕಸದ ತೆರಿಗೆಯನ್ನು ವಾರ್ಷಿಕವಾಗಿ ಬಿಬಿಎಂಪಿ ವಸೂಲಿ ಮಾಡಲಿದೆ.