ಇಂದಿನಿಂದ 3 ದಿನ ಸಿಇಟಿ ಪರೀಕ್ಷೆ; ಫೇಕ್‌ ಅಭ್ಯರ್ಥಿಗಳ ಕಡಿವಾಣಕ್ಕೆ ಕ್ಯುಆರ್‌ ಸ್ಕ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಮೊದಲ ಬಾರಿಗೆ ನಕಲಿ ಅಭ್ಯರ್ಥಿಗಳ ಕಡಿವಾಣಕ್ಕಾಗಿ ಕ್ಯೂ ಆರ್ ಸ್ಕ್ಯಾನ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಿದೆ.

ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕೆಇಎ, ಮೊದಲ ಬಾರಿಗೆ ಪರೀಕ್ಷಾ ಅಕ್ರಮ ತಡೆಗೆ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕ್ರಮಕ್ಕೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕ್ಯೂಆರ್ ಸ್ಕ್ಯಾನ್ ಮಾಡಿದ ನಂತರವೇ ವಿದ್ಯಾರ್ಥಿಗಳನ್ನು ಎಕ್ಸಾಂ ಹಾಲ್‌ಗೆ ಕಳುಹಿಸಲಾಗುವುದು. ಈ ಮೂಲಕ ಡೂಪ್ಲಿಕೇಟ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಸಿಇಟಿ ಪರೀಕ್ಷೆಯಿಂದ ಹಿಡಿದು ದಾಖಲಾತಿಯಾಗುವವರೆಗೂ ಕೆಇಎ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಇರಲಿದ್ದು, ಸೀಟ್ ಬ್ಲಾಕ್ ಸೇರಿದಂತೆ ಇನ್ನಿತರ ಅಕ್ರಮ ತಡೆಗೆ ಹೊಸ ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

ಪ್ರತಿ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಕ್ಯೂಆರ್ ಸ್ಕ್ಯಾನ್ ಮೂಲಕ ತಪಾಸಣೆ ಇರುತ್ತದೆ. ಕೇಂದ್ರದ ಮುಖ್ಯಸ್ಥರಿಗೆ ಕ್ಯೂಆರ್ ಸ್ಕ್ಯಾನ್ ಮಾಡಲು ಆಪ್ ವ್ಯವಸ್ಥೆ ಮಾಡಲಾಗಿರುತ್ತದೆ. ಇನ್ನು ಕ್ಯೂಆರ್ ಸ್ಕ್ಯಾನ್‌ನಲ್ಲಿ ಮೊದಲೇ ವಿದ್ಯಾರ್ಥಿ ಮಾಹಿತಿಯನ್ನು ಕೆಇಎ ಅಪ್‌ಲೋಡ್ ಮಾಡಿರುತ್ತದೆ. ವಿದ್ಯಾರ್ಥಿಗಳನ್ನ ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ. ಒಂದು ವೇಳೆ ಬೇರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾದರೆ ಇದರಿಂದ ಪತ್ತೆ ಹಚ್ಚಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!