ಕೋರ್ಟ್ ಅಂಗಳದಲ್ಲಿ ಚಹಾಲ್, ಧನಶ್ರೀ ವಿಚ್ಛೇದನ ಕೇಸ್: ನಾಳೆ ನಿರ್ಧಾರವಾಗಲಿದೆ ಡಿವೋರ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ಡಿವೋರ್ಸ್‌ ಕೋರಿ ಕೋರ್ಟ್ ಮೆಟ್ಟಿಲೇರಿದೆ. ಬಾಂಬೆ ಹೈಕೋರ್ಟ್‌ ಇಂದು ಯಜುವೇಂದ್ರ ಚಹಲ್ ವಿಚ್ಛೇದನದ ಅರ್ಜಿ ವಿಚಾರಣೆ ನಡೆಸಿದ್ದು ಮಹತ್ವದ ಆದೇಶ ನೀಡಿದೆ.

ಕಳೆದ ಎರಡೂವರೆ ವರ್ಷಗಳಿಂದ ಇವರಿಬ್ಬರು ಬೇರೆ, ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಅವರು ಡಿವೋರ್ಸ್ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

2025ರ IPL 18ನೇ ಆವೃತ್ತಿಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಚಹಲ್ ಅವರು ಈ ಬಾರಿಯ ಐಪಿಎಲ್‌ಗೆ 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ ತಂಡದ ಪಾಲಾಗಿದ್ದಾರೆ. ಐಪಿಎಲ್‌ಗೆ ಸಜ್ಜಾಗುತ್ತಿರುವ ಈ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ವಿಚ್ಛೇದನ ನೀಡುವಂತೆ ಬಾಂಬ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಾಳೆಯೊಳಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಮಾಡುವಂತೆ ಸೂಚನೆ ನೀಡಿದೆ.

ಕಳೆದ ಫೆಬ್ರವರಿ 5 ರಂದು ಯಜುವೇಂದ್ರ ಚಹಲ್ ಮತ್ತು ಧನಶ್ರೀ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಸೆಕ್ಷನ್ 13B ಹಿಂದೂ ವಿವಾಹ ಕಾಯ್ದೆ ಪ್ರಕಾರ ಯಾವುದೇ ದಂಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರೆ 6 ತಿಂಗಳ ಕಾಲ ಸಂಧಾನಕ್ಕೆ ಸಮಯಾವಕಾಶ ನೀಡಬೇಕು. ಆದರೆ ಈ 6 ತಿಂಗಳ ಸಂಧಾನ ಬೇಡ ಎಂದು ಚಾಹಲ್ ಮನವಿ ಸಲ್ಲಿಸಿದ್ದರು. ಬಾಂದ್ರಾ ಫ್ಯಾಮಿಲಿ ಕೋರ್ಟ್ 6 ತಿಂಗಳ ಒಳಗೆ ಡಿವೋರ್ಸ್‌ ನೀಡುವ ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಾಂದ್ರಾ ಕೌಟುಂಬಿಕ ಕೋರ್ಟ್‌ನಲ್ಲಿ ನಾಳೆ ಇಬ್ಬರ ವಾದವನ್ನು ಆಲಿಸಲಾಗುತ್ತಿದೆ. ಫ್ಯಾಮಿಲಿ ಕೋರ್ಟ್‌ ಯಾವ ತೀರ್ಪು ನೀಡುತ್ತೆ ಅನ್ನೋದು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಯಜುವೇಂದ್ರ ಚಹಲ್ ಅವರು ಡಿವೋರ್ಸ್ ಪಡೆಯಲು ಧನುಶ್ರೀಗೆ 4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶ ನೀಡಬೇಕಿದೆ. ಈಗಾಗಲೇ 2 ಕೋಟಿ 37 ಲಕ್ಷ ರೂಪಾಯಿ ಜೀವನಾಂಶ ನೀಡಿರೋ ಬಗ್ಗೆ ಚಹಲ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಇನ್ನುಳಿದ ಜೀವನಾಂಶದ ಬಗ್ಗೆ ನಾಳೆ ಕೋರ್ಟ್ ಏನು ಹೇಳಲಿದೆ ಅನ್ನೋದು ಮುಖ್ಯವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!