March 6, 2026
Friday, March 6, 2026
spot_img

ಸೋಶಿಯಲ್‌ ಮೀಡಿಯಾದಲ್ಲಿ ಚೈತ್ರಾ ಆಚಾರ್‌-ಅಶ್ವಿನಿ ವಾರ್‌ ವಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಮುಗಿದರೂ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಜಗಳ ಮುಗಿದಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ನಟಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಕಿತ್ತಾಡಿಕೊಂಡಿದ್ದಾರೆ.

ಬಿಗ್​ ಬಾಸ್​ ಸೀಸನ್​ 12ರ ಶೋನಲ್ಲಿ ವೈಲ್ಡ್​​ ಕಾರ್ಡ್ ಎಂಟ್ರಿ ಮೂಲಕ ರಜತ್​ ಹಾಗೂ ಚೈತ್ರಾ ಕುಂದಾಪುರ ಬಿಗ್​​ ಬಾಸ್​ ಮನೆಗೆ ಬಂದಿದ್ರು.

ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ​ ಶೇರ್​​ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ.

ಅಶ್ವಿನಿ ಪೋಸ್ಟ್‌ ಏನು?
ಕೈ, ಕಾಲಿನ ತುಂಬಾ ಆಗಿರುವ ಗಾಯದ ಕಲೆಗಳ ಪೋಸ್ಟ್‌ ಒಂದನ್ನು ಹಾಕಿ, ಇದು ಯಾವ ಪ್ರಾಣಿ ಪರಚಿರಬಹುದು? ಸರಿಯಾದ ಉತ್ತರ ಹಾಗೂ ಉತ್ತಮ ಶೀರ್ಷಿಕೆ ಕೊಟ್ಟವರಿಗೆ ಬಹುಮಾನ ಎಂದು ಪೋಸ್ಟ್‌ ಮಾಡಿದ್ದಾರೆ.

ಚೈತ್ರಾ ಉತ್ತರವೇನು?
ಪಕ್ಕಾ ಸರ್ಕಾರಿ ಶಾಲೆಯ ಕನ್ನಡ ಮೀಡಿಯಂ ಮಕ್ಕಳು ನಾವು.. ಇದನ್ನೆಲ್ಲಾ ನಮ್ಮ ಹತ್ರ ಇಟ್ಕೋಬೇಡಿ. ಇಂತಹ ಗಿಮಿಕ್‌ ಎಲ್ಲಾ ಕನ್ನಡ ಓದೋಕೆ ಬರಿಯೋಕೆ ಬರದ ಇಂಗ್ಲಿಷ್‌ ಮೀಡಿಯಂ ಮಕ್ಕಳ ಬಳಿ ಇಟ್ಕೊಳಿ ಎಂದು ಹೇಳಿದ್ದಾರೆ.
ನಂಗೂ ದೇಹದ ಮೇಲೆ ಪರಚಿದ ಕಲೆಗಳಿವೆ. ಆದ್ರೆ ಕ್ಷಮಿಸಿ ನನ್ನ ಬಳಿ ಯಾವುದೇ ಪಿಆರ್ ತಂಡ​ ಇಲ್ಲ ಎಂದು ಕೌಂಟರ್​ ಪೋಸ್ಟ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !