September 27, 2026
Sunday, September 27, 2026
spot_img

‘Toxic’ ರೈಟ್ಸ್‌ ಖರೀದಿಸೋಕೆ ನಾಮುಂದು.. ತಾಮುಂದು..ಅಂತಿವೆ OTTಗಳು! ರೇಟ್ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗಿಂತ ಮೊದಲೇ ದೊಡ್ಡ ಮಟ್ಟದ ಸುದ್ದಿಯಾಗಿದೆ. ವಿತರಣೆ ಹಕ್ಕುಗಳು, ಒಟಿಟಿ ಡೀಲ್‌ಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಈ ಸಿನಿಮಾ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶಗಳ ವಿತರಣೆ ಹಕ್ಕುಗಳನ್ನು ಖರೀದಿಸಲು ಭಾರೀ ಪೈಪೋಟಿ ನಡೆಯಿದ್ದು, ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಸಂಸ್ಥೆ ಸುಮಾರು 120 ಕೋಟಿ ರೂಪಾಯಿಗೆ ಈ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ತೆಲುಗು ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗೆ ಇಷ್ಟು ದೊಡ್ಡ ಮೊತ್ತ ಸಿಗುವುದು ಅಪರೂಪ ಎನ್ನಲಾಗಿದೆ.

ಇದನ್ನೂ ಓದಿ:

ಇದಕ್ಕಿಂತಲೂ ಹೆಚ್ಚಾಗಿ, ಒಟಿಟಿ ಹಕ್ಕುಗಳಿಗಾಗಿ ಪ್ರಮುಖ ಡಿಜಿಟಲ್ ವೇದಿಕೆಗಳು ಆಸಕ್ತಿ ತೋರಿದ್ದು, 300 ಕೋಟಿ ರೂಪಾಯಿವರೆಗೆ ಆಫರ್‌ಗಳ ಮಾತು ಕೇಳಿಬರುತ್ತಿದೆ. ಒಟ್ಟು ವಿತರಣೆ, ಆಡಿಯೋ ಹಾಗೂ ಡಿಜಿಟಲ್ ಹಕ್ಕುಗಳನ್ನು ಸೇರಿಸಿ ಸಿನಿಮಾ ಈಗಾಗಲೇ 650 ಕೋಟಿ ವ್ಯವಹಾರ ಮಾಡಿದೆ ಎಂಬ ವರದಿಗಳು ಹೊರಬಿದ್ದಿವೆ.

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಹಲವು ಟಾಪ್ ನಟಿಯರು ನಟಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಆ್ಯಕ್ಷನ್ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.

Must Read