ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಅವರೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಹಿಂದೆ ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಅವರು ಸಾಲು ಸಾಲು ಆರೋಪ ಮಾಡಿದ್ದರು. ಆದ್ರೆ ಇದೀಗ ಚೈತ್ರಾ ಕುಂದಾಪುರ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನನ್ನ ಜೀವ ತೆಗೆಯಲು ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯವನ್ನು ಮಾಡಬಹುದು ಎಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.