ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಚೈತ್ರಾ ವಾಸುದೇವನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಜನಪ್ರಿಯ ನಿರೂಪಕಿ , ಬಿಗ್​​ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಕಾಮಿಡಿ ಕಿಲಾಡಿಗಳು ನಿರೂಪಕಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇಷ್ಟು ದಿನ ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿರೋ ನಿರೂಪಕಿ ಚೈತ್ರಾ ತಮ್ಮ ಜೀವನದಲ್ಲಿ ಮತ್ತೊಮ್ಮೆ ಹೊಸ ಸಂಗಾತಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ಈ ಬಗ್ಗೆ ಖುದ್ದು ಚೈತ್ರಾ ವಾಸುದೇವನ್ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು ಸಂತೋಷದ ಸುದ್ದಿ ಹಂಚಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆಗೆ ಕಾಲಿಡುತ್ತೇನೆ. ನನ್ನ ವಿವಾಹದ ಸುಂದರ ಪ್ರಯಾಣ. ಈ ಮುಂದಿನ ಹೆಜ್ಜೆ ಹಾಕುವಾಗ, ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯು, ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ ಅಂತ ಬರೆದುಕೊಂಡಿದ್ದಾರೆ.

7 ವರ್ಷದ ದಾಂಪತ್ಯ ಬದುಕಿಗೆ ಅಂತ್ಯ ಹೇಳಿದ್ದ​ ಚೈತ್ರಾ
ಈ ಹಿಂದೆ ಚೈತ್ರಾ ವಾಸುದೇವನ್ ವಿಚ್ಛೇದನ ಬಗ್ಗೆ ಘೋಷಿಸಿದ್ದರು. 7 ವರ್ಷದ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದರು. 2017ರಲ್ಲಿ ಸತ್ಯ ನಾಯ್ಡು ಅವರನ್ನು ವಿವಾಹವಾಗಿದ್ದರು. ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ನಿರೂಪಕಿ ಆಗಿ ಕಾಣಿಸಿಕೊಳ್ಳುತ್ತಿದ್ದರು. ಕಿಚ್ಚ ಸುದೀಪ್​ ನಿರೂಪಣೆಯ ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಚೈತ್ರಾ ಅವರು ಡಿವೋರ್ಸ್​ಗೆ ಕಾರಣ ಏನು ಅಂತ ಬಹಿರಂಗ ಪಡಿಸಿದ್ದರು.

ಸದ್ಯ ಚೈತ್ರಾ ವಾಸುದೇವನ್ ಅವರು ಯಾರನ್ನು ಮದುವೆ ಆಗುತ್ತಿದ್ದಾರೆ, ಆ ಹುಡುಗ ಯಾರು, ಕೆಲಸ ಏನು ಎಂಬುದರ ಬಗ್ಗೆ ರಿವೀಲ್ ಮಾಡಿಲ್ಲ. ಅಲ್ಲದೇ ಇದೇ ವರ್ಷ ಮಾರ್ಚ್​ನಲ್ಲಿ ಮದುವೆ ಆಗಲಿದ್ದೇವೆ ಅಂತ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನೂ ನಟಿ ಶೇರ ಮಾಡಿಕೊಂಡ ವಿಡಿಯೋ ನೋಡಿದ ನೆಟ್ಟಿಗರು ಹೊಸ ಜೋಡಿಗೆ ಶುಭಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!