March 7, 2026
Saturday, March 7, 2026
spot_img

ಹಬ್ಬದಲ್ಲಿ ಕುರಿಯ ರಕ್ತ ಹೀರಿದ ಅರ್ಚಕ, ಬೆಚ್ಚಿಬಿದ್ದ ಚಾಮರಾಜನಗರ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರದ ಜಾತ್ರೆಯೊಂದರಲ್ಲಿ ಅರ್ಚಕರೊಬ್ಬರು ಕುರಿಯ ರಕ್ತವನ್ನು ಹೀರಿ ಕುಡಿದಿದ್ದಾರೆ, ಈ ಆಚರಣೆ ನೋಡಿ ಜನ ಬೆಚ್ಚಿಬಿದ್ದಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ದೊಡ್ಡಮ್ಮ ತಾಯಿ ಹಬ್ಬ ನಡೆದಿದೆ. ಈ ವೇಳೆ ಹರಕೆಯ ಕುರಿಗಳ ಕುತ್ತಿಗೆಗೆ ಬಾಯಿ ಹಾಕಿದ ಅರ್ಚಕರೊಬ್ಬರು ರಕ್ತವನ್ನು ಹೀರಿದ್ದಾರೆ.

ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮ ತಾಯಿ ಜಾತ್ರೆಯಲ್ಲಿ ಕುರಿ ರಕ್ತ ಹೀರುವ ಸಂಪ್ರದಾಯ ನಡೆದಿದೆ. ಅರ್ಚಕ ಮಾದಶೆಟ್ಟಿ ಎಂಬವರು ಕುರಿ ರಕ್ತ ಹೀರುವ ವಿಡಿಯೋ ಭಕ್ತರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ‌.

ದೊಡ್ಡಮ್ಮ ತಾಯಿ ರಥದಲ್ಲಿ ನಿಂತಿರುವ ಅರ್ಚಕನಿಗೆ ಅಲ್ಲೇ ಬಲಿಕೊಟ್ಟ ಕುರಿಯನ್ನು ನೀಡಿದಾಗ ಹಲ್ಲಿನಿಂದ ಕಚ್ಚಿ ರಕ್ತ ಹೀರಿದರೆ ದೇವರನ್ನು ಸಂತೃಪ್ತಿಗೊಳಿಸಿದ ಹಾಗೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಮೊದಲ ಬಾರಿ ಜಾತ್ರೆಗೆ ಹೋದ ಜನ, ಸಂಪ್ರದಾಯ ಗೊತ್ತಿಲ್ಲದ ಜನ ಈ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !