ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ನೂತನ ಮುಖ್ಯಮಂತ್ರಿ ಚಂಪೈ ಸೊರೆನ್ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಮಂಡಿಸಲಿದ್ದಾರೆ.
ಬಿಜೆಪಿ, ಶಾಸಕರಿಗೆ ಲಂಚ ಕೊಟ್ಟು ಖರೀದಿಸಬಹುದು ಎಂಬ ಆತಂಕದ ನಡುವೆಯೇ ಫೆ.2ರಂದು ಹೈದರಾಬಾದ್‌ಗೆ ತೆರಳಿದ್ದ ಜೆಎಂಎಂ ನೇತೃತ್ವದ ಮೈತ್ರಿಕೂಟದ 40 ಶಾಸಕರು ವಿಶ್ವಾಸ ಮತಯಾಚನೆ ಬಳಿಕ ಭಾನುವಾರ ರಾಂಚಿಗೆ ಮರಳಿದ್ದಾರೆ.
ಶಾಸಕರನ್ನು ವಿಮಾನ ನಿಲ್ದಾಣದಿಂದ ಸರ್ಕಾರಿ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಈ ಶಾಸಕರಿಗೆ ಹೈದರಾಬಾದ್‌ನ ಹೊರವಲಯದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಮೂರು ದಿನಗಳ ವಾಸ್ತವ್ಯದ ವ್ಯವಸ್ಥೆ ಕೂಡ ಮಾಡಲಾಗಿದೆ.
ಬಂಧನಕ್ಕೂ ಮುನ್ನ ಹೇಮಂತ್ ಸೊರೆನ್ ಜನವರಿ 31ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚಂಪೈ ಸೊರೆನ್ ಫೆಬ್ರವರಿ 2 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ನಡೆದ ಸರ್ಕಾರದ ಪರಿಷತ್ತಿನ ಮೊದಲ ಸಭೆಯಲ್ಲಿ ಇದೇ ದಿನ ವಿಶ್ವಾಸಮತ ಯಾಚನೆ ಮಾಡಲು ನಿರ್ಧರಿಸಲಾಯಿತು.