ಚಾಂಪಿಯನ್ಸ್‌ ಟ್ರೋಫಿ । ಡಕೆಟ್‌, ರೂಟ್‌ ಶತಕದ ಜೊತೆಯಾಟ: ಆಸೀಸ್‌ ಗೆಲುವಿಗೆ 352 ರನ್‌ ಗುರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಾಂಪಿಯನ್ಸ್‌ ಟ್ರೋಫಿ 4ನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 351 ರನ್‌ ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 352 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 5.2 ಓವರ್‌ಗಳಲ್ಲೇ 43 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಪ್ಯಾಟ್‌ ಕಮ್ಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್ವುಡ್‌ ಅವರಂತಹ ದೈತ್ಯ ಬೌಲರ್‌ಗಳಿಲ್ಲದೇ ಅನೇಕ ಹೊಸಬರೊಂದಿಗೆ ಕಣಕ್ಕಿಳಿದ ಆಸೀಸ್‌ ಸ್ಪರ್ಧಾತ್ಮಕ ಪೈಪೋಟಿ ನೀಡುವ ನಿರೀಕ್ಷೆ ಹೆಚ್ಚಿಸಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ಬೆನ್‌ ಡಕೆಟ್‌ ಹಾಗೂ ಜೋ ರೂಟ್‌ ಶತಕದ ಜೊಯಾಟ ನೀಡುವ ಮೂಲಕ ಇಂಗ್ಲೆಂಡ್‌ಗೆ ಜೀವ ತುಂಬಿದರು.

ರೂಟ್‌ 78 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 68 ರನ್‌ ಗಳಿಸಿ ಔಟಾದರು. ಆ ಬಳಿಕವೂ ಘಾತುಕ ದಾಳಿ ನಡೆಸಿದ ಬೆನ್‌ ಡಕೆಟ್‌ ಆಸೀಸ್‌ ಬೌಲರ್‌ಗಳನ್ನು ಚೆನ್ನಾಗಿ ಬೆಂಡೆತ್ತಿದರು. ಕೊನೆಯವರೆಗೂ ಹೋರಾಡಿದ ಡಕೆಟ್‌ 143 ಎಸೆತಗಳಲ್ಲಿ 165 ರನ್‌ (17 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಇದರೊಂದಿಗೆ ನಾಯಕ ಜೋಸ್‌ ಬಟ್ಲರ್‌ 23 ರನ್‌, ಜೋಫ್ರಾ ಆರ್ಚರ್‌ 21 ರನ್‌, ಲಿಯಾಮ್‌ ಲಿವಿಂಗ್‌ಸ್ಟನ್‌14 ರನ್‌, ಜೇಮಿ ಸ್ಮಿತ್‌ 15 ರನ್‌, ಫಿಲ್‌ ಸಾಲ್ಟ್‌ 10 ರನ್‌ಗಳ ಕೊಡುಗೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!